ಭಾರತೀನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ : ಟಿವಿಎಸ್ ಸ್ಕೂಟರ್ ಸವಾರನ ಸ್ಥಿತಿ ಗಂಭೀರ

| Published : Sep 24 2024, 01:50 AM IST / Updated: Sep 24 2024, 06:27 AM IST

ಸಾರಾಂಶ

ಭಾರತೀನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ, ಶ್ರೀರಂಗಪಟ್ಟಣದಲ್ಲಿ ಎರಡು ಅಪರಿಚಿತ ಶವಗಳು ಪತ್ತೆಯಾಗಿವೆ.

 ಭಾರತೀನಗರ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟಿವಿಎಸ್ ಎಕ್ಸ್‌ಲೆನ್ಸ್ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾರತೀನಗರದ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಜರುಗಿದೆ.

ಬಿದರಹಳ್ಳಿ ಪುಟ್ಟಸ್ವಾಮಿ (75) ಗಂಭೀರವಾಗಿ ಗಾಯಗೊಂಡವರು. ಪುಟ್ಟಸ್ವಾಮಿ ಭಾರತೀ ನಗರದ ಹಲಗೂರು ವೃತ್ತದಲ್ಲಿ ಯುಟರ್ನ್ ಮಾಡುವಾಗ ಮಳವಳ್ಳಿ ಕಡೆಯಿಂದ ಬೆಂಗಳೂರಿಗೆ ತೆರಳಲು ಭಾರತೀನಗರದ ಮಾರ್ಗವಾಗಿ ಬರುವಾಗ ಟಿವಿಎಸ್ ಎಕ್ಸೆಲ್ ಸ್ಕೂಟರ್ ಬಸ್‌ನ ಮುಂಭಾಗಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ವೈದ್ಯರು ರವಾನಿಸಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಜಖಂಗೊಂಡಿದ್ದ ಬೈಕ್ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾರಿಗೆ ಬಸ್ಸನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಪ್ರತ್ಯೇಕ ಪ್ರಕರಣ ಇಬ್ಬರು ಅಪರಿಚಿತ ಶವಗಳ ಪತ್ತೆ

ಶ್ರೀರಂಗಪಟ್ಟಣ: ಪಟ್ಟಣದ ಸರ್ಕಾರಿ ಆಸ್ಪತ್ರೆ, ತಾಲೂಕಿನ ಕಾರೇಕುರ ಗ್ರಾಮದ ಕಾವೇರಿ ನದಿ ಬಳಿ ಅಪರಿಚಿತ ವ್ಯಕ್ತಿಗಳು ಶವ ಪತ್ತೆಯಾಗಿದೆ. ಪಟ್ಟಮದ ಆಸ್ಪತ್ರೆ ಬಳಿಯ ಮೃತ ವ್ಯಕ್ತಿಗೆ 55 ವರ್ಷವಾಗಿದೆ. 5.5 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈ ಬಣ್ಣ, ಸಣಕಲು ಶರೀರ, ಎಡಗೈನಲ್ಲಿ ರಾಜು ಎಂ.ಜಿ.ಆರ್, ಸರೋಜಮ್ಮ, ಸಿದ್ದಮ್ಮ ಎಂಬ ಹೆಸರಿನ ಹಸಿರು ಹಚ್ಚೆಗಳಿವೆ

ವಾರಸುದಾರರಿದ್ದಲ್ಲಿ ದೂ.ಸಂ: 08232-22488, ಮೊ-9480804800, ಮೊ-9480804855 ಅನ್ನು ಸಂಪರ್ಕಿಸಬಹುದು ಎಂದು ಪಟ್ಟಣದ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಕಾರೇಕುರ ಗ್ರಾಮದ ಕಾವೇರಿ ನದಿ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತನಿಗೆ ಸುಮಾರು 35-40 ವರ್ಷವಾಗಿದೆ. ದುಂಡು ಮುಖ, ದೃಢಕಾಯ ಶರೀರ, ಕಪ್ಪು ತಲೆಕೂದಲು, ಬಲಗೈ ಮೇಲೆ ಸಾಗರ್ ಎಂದು ಹಿಂದಿಯಲ್ಲಿ ಹಸಿರು ಹಚ್ಚೆ ಇದ್ದು, ತುಂಬು ತೋಳಿನ ಶರ್ಟ್ ಧರಿಸಿದ್ದಾನೆ.ಮೃತರ ವಾರಸುದಾರರಿದ್ದಲ್ಲಿ ದೂ.ಸಂ: 08232-22488, ಮೊ-9480804800, ಮೊ-9480804855 ಅನ್ನು ಸಂಪರ್ಕಿಸಬಹುದು ಎಂದು ಪಟ್ಟಣದ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.