ಕಸಾಯಿಖಾನೆಗೆ ಜಾನುವಾರುಗಳ ಸಾಗಾಣೆ, ಪೊಲೀಸರ ವಶಕ್ಕೆ

| Published : Jun 04 2024, 12:33 AM IST / Updated: Jun 04 2024, 05:49 AM IST

ಕಸಾಯಿಖಾನೆಗೆ ಜಾನುವಾರುಗಳ ಸಾಗಾಣೆ, ಪೊಲೀಸರ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನ ಗಾಂಧಿನಗರ ನಿವಾಸಿ ಸೀರಾಜ್, ಅರುಣ್ ಅವರು ಕೆಆರ್‌ಪೇಟೆಯ ತೆಂಡೆಕೆರೆ ಸಂತೆಯಿಂದ ಕರುಗಳ ಖರೀದಿ ಮಾಡಿ ಮೈಸೂರಿನ ಕಸಾಯಿ ಖಾನೆಗೆ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಕರುಗಳ ತುಂಬಿದ್ದ ಕಾರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮೈಸೂರಿನ ಕಸಾಯಿ ಖಾನೆಗೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ನಡೆದಿದೆ.

ಮೈಸೂರಿನ ಗಾಂಧಿನಗರ ನಿವಾಸಿ ಸೀರಾಜ್, ಅರುಣ್ ಅವರು ಕೆಆರ್‌ಪೇಟೆಯ ತೆಂಡೆಕೆರೆ ಸಂತೆಯಿಂದ ಕರುಗಳ ಖರೀದಿ ಮಾಡಿ ಮೈಸೂರಿನ ಕಸಾಯಿ ಖಾನೆಗೆ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಕರುಗಳ ತುಂಬಿದ್ದ ಕಾರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಒಂದೇ ಕಾರಿನಲ್ಲಿ 21 ಕರುಗಳನ್ನು ತುಂಬಿದ್ದ ಹಿನ್ನೆಲೆಯಲ್ಲಿ ಠಾಣೆ ಬಳಿ ಕರೆತರುವ ವೇಳೆಗೆ 6 ಕರುಗಳು ಉಸಿರುಗಟ್ಟಿ ಮೃತಪಟ್ಟಿವೆ. ಉಳಿದ ಜಾನುವರುಗಳಿಗೆ ಹಾಲುಣಿಸಿ, ಬ್ಯಾಟರಾಯನಕೊಪ್ಪಲು ಗ್ರಾಮದ ಬಳಿಯ ಚೈತ್ರ ಗೋಶಾಲೆಗೆ ಮತ್ತೊಂದು ವಾಹನದಲ್ಲಿ ತುಂಬಿ ರವಾನೆ ಮಾಡಿದ್ದಾರೆ. ಮೃತ ಜಾನುವರುಗಳನ್ನು ಪೊಲೀಸರು ಪಶು ವೈದ್ಯರ ಮೂಲಕ ಪರಣೋತ್ತರ ಪರೀಕ್ಷೆ ನಡೆಸಿ, ನದಿ ತೀರ ಪ್ರದೇಶದಲ್ಲಿ ಅಂತ್ಯಕ್ರಿಯೆ ನಡೆಸಿದಾರೆ.

ಪಟ್ಟಣದ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಪ್ರದೀಪ್ (ಗಿಡ್ಡು) ಹಾಗೂ ಇತರ ಕಾರ್ಯಕರ್ತರು ಬೆಳಗಿನ 7ರ ಸಮಯದಲ್ಲಿ ಕಾರ್ಯಾಚಾರಣೆ ನಡೆಸಿದರು.

ಕಾವೇರಿ ನದಿಯಲ್ಲಿ ಮಹಿಳೆ, ಪುರುಷ ಶವಗಳು ಪತ್ತೆ

ಶ್ರೀರಂಗಪಟ್ಟಣ:ಪಟ್ಟಣ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯ ದಕ್ಷಿಣ ಕಾವೇರಿ ಸೇತುವೆ ಬಳಿಯ ಕಾವೇರಿ ನದಿಯಲ್ಲಿ ಮಹಿಳೆ ಹಾಗೂ ಪುರುಷನ ಎರಡು ಶವಗಳು ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಸುಮಾರು 40 ರಿಂದ 45 ವರ್ಷದ ಈ ಎರಡು ಶವಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳಾ ಶವ, ಮತ್ತೊಂದು ಹಿಂದು ಸಂಪ್ರದಾಯದ ಪುರುಷ ಶವವಾಗಿದೆ. ಎರಡು ಶವಗಳು ಕೊಳೆತ ಸ್ಥಿತಿಯಲ್ಲಿದ್ದು ಮೃತರ ಗುರುತು, ವಿಳಾಸವು ಸಹ ಪತ್ತೆಯಾಗಿಲ್ಲ.ಕಳೆದ ನಾಲ್ಕೈದು ದಿನಗಳ ಹಿಂದೆ ನೀರಿನಲ್ಲಿ ಬಿದ್ದಿದ್ದು, ನದಿಯಲ್ಲಿ ಬೆಳೆದ ಹುಲ್ಲು ಜೊಂಡಿನಲ್ಲಿ ಸೇರಿಕೊಂಡಿದ್ದರಿಂದ ಶವಗಳು ತೇಲುತ್ತಿದ್ದುದ್ದನ್ನು ಸೇತುವೆ ಮೇಲೆ ಹಾದು ಹೋಗುತ್ತಿದ್ದ ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಶವಗಳನ್ನು ನದಿಯಿಂದ ಹೊರ ತೆಗೆದು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ನದಿ ತೀರದಲ್ಲೇ ವೈದ್ಯರಿಂದ ಶವ ಪರೀಕ್ಷೆ ನಡೆಸಿ ಅಲ್ಲೆ ಮಣ್ಣು ಮಾಡಿದ್ದಾರೆ. ಈ ಕುರಿತು ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಶವ ಮೇಲೆತ್ತುವ ವೇಳೆ ಶವ ನೋಡಲು ದಕ್ಷಿಣ ಸೇತುವೆ ಬಳಿ ಹೆದ್ದಾರಿಯಲ್ಲಿ ನೂರಾರು ಜನರು ಜಮಾಯಿಸಿದ್ದರು. ಇದರಿಂದ ರಸ್ತೆಯಲ್ಲೂ ಸಹ ವಾಹನಗಳು ಜಮಾವಣೆಗೊಂಡು ಪ್ರಯಾಣಿಕರು ಪರದಾಡುವಂತಾಗಿತ್ತು. ಪೊಲೀಸರು ವಾಹನ ತೆರವುಗಳಿಸಲು ಹರ ಸಾಹಸ ಮಾಡುತ್ತಿದ್ದುದ್ದು ಕಂಡು ಬಂತು.