ಆಕಸ್ಮಿಕ ಬೆಂಕಿಗೆ ಬೆಲೆ ಬಾಳುವ ಮರಗಳು ಸುಟ್ಟು ಭಸ್ಮ

| Published : Apr 17 2024, 01:16 AM IST

ಸಾರಾಂಶ

ಎಸ್.ಐ.ಹೊನ್ನಲಗೆರೆ ಗ್ರಾಮದ ಎಚ್.ವಿ.ಮಾದೇಗೌಡರು ತಮ್ಮ 5 ಎಕೆರೆ ಜಮೀನಿನ 1 ಭಾಗದ 20 ಗುಂಟೆಯಲ್ಲಿ ತೆಂಗು, ತೇಗ, ಅಡಿಕೆ, ಹೆಬ್ಬೇವು, ಹಿಪ್ಪುನೇರಳೆ, ಶ್ರೀಗಂಧ ಮರಗಳನ್ನು ಬೆಳೆದಿದ್ದರು. ಮಂಗಳವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಆಕಸ್ಮಿಕ ಬೆಂಕಿ ಬಿದ್ದು ಜಮೀನಿನಲ್ಲಿದ್ದ ಮರಗಳು ಸುಟ್ಟು ಅಪಾರ ನಷ್ಟವಾಗಿರುವ ಘಟನೆ ಎಸ್.ಐ.ಹೊನ್ನಲಗೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಎಚ್.ವಿ.ಮಾದೇಗೌಡರು ತಮ್ಮ 5 ಎಕೆರೆ ಜಮೀನಿನ 1 ಭಾಗದ 20 ಗುಂಟೆಯಲ್ಲಿ ತೆಂಗು, ತೇಗ, ಅಡಿಕೆ, ಹೆಬ್ಬೇವು, ಹಿಪ್ಪುನೇರಳೆ, ಶ್ರೀಗಂಧ ಮರಗಳನ್ನು ಬೆಳೆದಿದ್ದರು. ಮಂಗಳವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಬಿಸಿಲಿನ ತಾಪಕ್ಕೆ ಬೆಂಕಿ ಕೆನ್ನಾಲಿಗೆ ಆವರಿಸುತ್ತಿದ್ದಂತೆ ತಕ್ಷಣ ಅಕ್ಕ-ಪಕ್ಕದಲ್ಲಿ ಕೆಲಸ ಮಾಡುತ್ತಿದ್ದವರು ಬೆಂಕಿಯನ್ನು ಕಂಡು ಜಮೀನಿನಲ್ಲಿ ಹಸುಕರುಗಳಿಗೆ ನಿರ್ಮಿಸಲಾಗಿದ್ದ ನೀರಿನ ತೊಟ್ಟಿ ನೀರನ್ನು ಬಳಸಿ ಆದಷ್ಟು ಬೆಂಕಿಯನ್ನು ನಂದಿಸಿದ್ದಾರೆ.ಬೈಕ್ ಗೆ ಕಾರು ಡಿಕ್ಕಿ: ಸವಾರ ಸಾವು

ಮಳವಳ್ಳಿ:ಬೈಕ್ ಗೆ ಕಾರು ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಬುಗತಗಹಳ್ಳಿ ಬಳಿ ನಡೆದಿದೆ.

ತಾಲೂಕಿನ ದೇವಿಪುರ ಗ್ರಾಮದ ಪುಟ್ಟಚಾರಿ ಪುತ್ರ ದೇವರಾಜು(21) ಮೃತಪಟ್ಟವರು. ತಾಲೂಕಿನ ಎಂ.ಬಸವನಪುರ ಮತ್ತು ಬುಗತಗಹಳ್ಳಿ ಬಳಿ ಮಳವಳ್ಳಿ-ಮದ್ದೂರು ಹೆದ್ದಾರಿಯಲ್ಲಿ ಸೋಮವಾರ ಸಂಜೆ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಹಿಂಬದಿ ಸವಾರ ಮಧು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ.