ವಿಡಿಯೋ ಕರೆ ಮಾಡಿ ವ್ಯಕ್ತಿಯ ಜತೆಗೆ ಮಾತನಾಡಿರುವ ವಿಡಿಯೋ : ದರ್ಶನ್‌ ವಿರುದ್ಧ ಪ್ರತ್ಯೇಕ ಎಫ್‌ಐಆರ್‌

| Published : Aug 27 2024, 10:02 AM IST

Darshan Thoogudeepa

ಸಾರಾಂಶ

ಜೈಲಿನಿಂದ ವಿಡಿಯೋ ಕರೆ ಮಾಡಿ ಮತ್ತೊಬ್ಬ ವ್ಯಕ್ತಿಯ ಜತೆಗೆ ಮಾತನಾಡಿರುವ ವಿಡಿಯೋ ಸಂಬಂಧ ಕೊಲೆ ಆರೋಪಿ ನಟ ದರ್ಶನ್‌ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಾಗುವ ಸಾಧ್ಯತೆಯಿದೆ.

ಬೆಂಗಳೂರು :  ಜೈಲಿನಿಂದ ವಿಡಿಯೋ ಕರೆ ಮಾಡಿ ಮತ್ತೊಬ್ಬ ವ್ಯಕ್ತಿಯ ಜತೆಗೆ ಮಾತನಾಡಿರುವ ವಿಡಿಯೋ ಸಂಬಂಧ ಕೊಲೆ ಆರೋಪಿ ನಟ ದರ್ಶನ್‌ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಾಗುವ ಸಾಧ್ಯತೆಯಿದೆ.

ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳು ಅಥವಾ ಸಜಾ ಬಂಧಿಗಳು ಜೈಲಿನಲ್ಲಿ ಇರುವಾಗ ಜೈಲು ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಹೀಗಾಗಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ವಿಡಿಯೋ ಕರೆಯಲ್ಲಿ ವ್ಯಕ್ತಿಯೊಬ್ಬನ ಜತೆಗೆ ಮಾತನಾಡಿರುವ ವಿಡಿಯೋ ಹೊರಬಿದ್ದಿದೆ. ಹೀಗಾಗಿ ಕೇಂದ್ರ ಕಾರಾಗೃಹದ ಅಧಿಕಾರಿಗಳು ನಟ ದರ್ಶನ್‌ ವಿರುದ್ಧ ಪ್ರತ್ಯೇಕ ದೂರು ನೀಡಲಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.