ಪತಿ ಮನೆಯವರ ವರದಕ್ಷಿಣೆ ಹಾಗೂ ಮಾನಸಿಕವಾಗಿ ನೀಡುತ್ತಿದ್ದ ಕಿರುಕುಳ ತಾಳಲಾರದೆ ಗೃಹಿಣೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆಯ ಜಂಬೂಸವಾರಿ ದಿಣ್ಣೆಯ ಮನೆಯೊಂದರಲ್ಲಿ ನಡೆದಿದೆ.
-8 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ದಂಪತಿ
-ವರದಕ್ಷಿಣೆ ತರುವಂತೆ ಪತಿ, ಅತ್ತೆಯ ಕಿರುಕುಳಕನ್ನಡಪ್ರಭ ವಾರ್ತೆ ಬೆಂಗಳೂರುಪತಿ ಮನೆಯವರ ವರದಕ್ಷಿಣೆ ಹಾಗೂ ಮಾನಸಿಕವಾಗಿ ನೀಡುತ್ತಿದ್ದ ಕಿರುಕುಳ ತಾಳಲಾರದೆ ಗೃಹಿಣೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆಯ ಜಂಬೂಸವಾರಿ ದಿಣ್ಣೆಯ ಮನೆಯೊಂದರಲ್ಲಿ ನಡೆದಿದೆ.
ಕೋಲಾರ ಮೂಲದ ಸಿರಿಶಾ(24) ಆತ್ಮಹತ್ಯೆಗೆ ಶರಣಾದವರು. ಮೃತರ ಕುಟುಂಬದವರು ನೀಡಿದ ದೂರಿನ ಅನ್ವಯ ಸಿರಿಶಾ ಪತಿ ಪ್ರದೀಪ್ ಮತ್ತು ಇವರ ತಾಯಿ ರಮಣಿ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೋಲಾರ ಮೂಲದ ಸಿರಿಶಾ ಅವರು ಪ್ರದೀಪ್ನನ್ನು 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಆರಂಭದಲ್ಲಿ ಅನೋನ್ಯವಾಗಿದ್ದರು, ನಂತರ ಸಣ್ಣ ಪುಟ್ಟ ವಿಚಾರಕ್ಕೆ ಯಾವಾಗಲು ಜಗಳವಾಡುತ್ತಿದ್ದರು. ಸಿರಿಶಾಗೆ ವರದಕ್ಷಿಣೆ ತರುವಂತೆ ಪತಿ ಹಾಗೂ ಅತ್ತೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಸಿರಿಶಾ ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಜಂಬುಸವಾರಿ ದಿಣ್ಣೆ ಬಳಿಯ ಜಿ.ಆರ್ ಅಪಾರ್ಟ್ಮೆಂಟ್ನ ಕೊಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತಳ ಕುಟುಂಬದವರು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
