ಯುವತಿಯನ್ನು ಟ್ಯಾಂಕ್‌ ಮೇಲೆ ಕೂರಿಸಿ ಬೈಕ್‌ ಚಾಲನೆ: ಬಂಧನ

| Published : May 20 2024, 01:34 AM IST / Updated: May 20 2024, 04:58 AM IST

ಯುವತಿಯನ್ನು ಟ್ಯಾಂಕ್‌ ಮೇಲೆ ಕೂರಿಸಿ ಬೈಕ್‌ ಚಾಲನೆ: ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಯುವತಿಯನ್ನು ಪೆಟ್ರೋಲ್‌ ಟ್ಯಾಂಕ್ ಮೇಲೆ ಕೂರಿಸಿಕೊಂಡು ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಚಲಿಸುತ್ತಿರುವಾಗ ಬೈಕ್‌ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಇತ್ತೀಚೆಗೆ ಯುವತಿಯನ್ನು ಪೆಟ್ರೋಲ್‌ ಟ್ಯಾಂಕ್ ಮೇಲೆ ಕೂರಿಸಿಕೊಂಡು ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಚಲಾಯಿಸಿದ್ದ ಸವಾರನನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾವಲ್‌ ಬೈರಸಂದ್ರದ ಎಂ.ವಿ.ಲೇಔಟ್‌ ನಿವಾಸಿ ಸಿಲಂಬರಸನ್‌ (21) ಬಂಧಿತ ಸವಾರ. ಇತ್ತೀಚೆಗೆ ಬೆಂಗಳೂರು-ಬಳ್ಳಾರಿ ರಸ್ತೆಯ ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಯಲಹಂಕ ಕಡೆಯಿಂದ ಹೆಬ್ಬಾಳ ಕಡೆಗೆ ಬರುವಾಗ ಸವಾರನೊಬ್ಬ ಪೆಟ್ರೋಲ್‌ ಟ್ಯಾಂಕ್‌ ಮೇಲೆ ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಚಲಾಯಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಈ ವಿಡಿಯೋ ಆಧರಿಸಿ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಆ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಸವಾರ ಸಿಲಂಬರಸನ್‌ನನ್ನು ಬಂಧಿಸಿ, ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸುವುದರ ಜೊತೆಗೆ ಸವಾರ ಸಿಲಂಬರಸನ್‌ನ ಚಾಲನಾ ಪರವಾನಗಿ (ಡಿ.ಎಲ್‌) ಅಮಾನತುಗೊಳಿಸಲು ಸಂಬಂಧಪಟ್ಟ ಆರ್‌ಟಿಒ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

ವಾಹನ ಚಾಲನೆ ವೇಳೆ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿದರೆ, ಅಜಾಗರೂಕತೆ ಪ್ರದರ್ಶಿಸಿದರೆ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಉತ್ತರ ಸಂಚಾರ ವಿಭಾಗದ ಡಿಸಿಪಿ ಡಿ.ಆರ್‌.ಸಿರಿಗೌರಿ ಎಚ್ಚರಿಸಿದ್ದಾರೆ.