ನಟಿ ಮಾನ್ವಿತಾ ಕಾಮತ್ ಅವರು ಮೇ.1ರಂದು ಮದುವೆ ಆಗುತ್ತಿದ್ದಾರೆ.

 ಸಿನಿವಾರ್ತೆ

ನಟಿ ಮಾನ್ವಿತಾ ಕಾಮತ್‌ ಮೇ 1ರಂದು ಮದುವೆ ಆಗುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಮಾನ್ವಿತಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾನ್ವಿತಾ ಮದುವೆ ಆಗುತ್ತಿರುವ ಹುಡುಗ ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕುಮಾರ್.

ಏ.29ಕ್ಕೆ ಮೆಹಂದಿ ಕಾರ್ಯಕ್ರಮ ನಡೆಯಲಿದ್ದು, ಏಪ್ರಿಲ್‌ 30ಕ್ಕೆ ಸಂಗೀತ್‌ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಮೇ 1ಕ್ಕೆ ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆಯಲಿದೆ.