ಸಾರಾಂಶ
ಚಲನಚಿತ್ರ ರಂಗದ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ಅವರ ಚಲನಚಿತ್ರ ಗೀತೆಗಳ ನೆನಪಿನ ಸಂಗೀತ ಸಂಜೆ ‘ಎ ಶ್ಯಾಮ್ ಮಸ್ತಾನಿ’ ಕಾರ್ಯಕ್ರಮ ಅ.26ರಂದು ಸಂಜೆ 5ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿಂದಿ ಚಲನಚಿತ್ರ ರಂಗದ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ಅವರ ಚಲನಚಿತ್ರ ಗೀತೆಗಳ ನೆನಪಿನ ಸಂಗೀತ ಸಂಜೆ ‘ಎ ಶ್ಯಾಮ್ ಮಸ್ತಾನಿ’ ಕಾರ್ಯಕ್ರಮ ಅ.26ರಂದು ಸಂಜೆ 5ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.ಗಾಯಕ ಮತ್ತು ಸಂಗೀತ ನಿರ್ದೇಸಕ ಸೌಂಡ್ ಆಫ್ ಮ್ಯೂಸಿಕ್ ಗುರು ಅವರ ನೇತೃತ್ವದ ಈ ಕಾರ್ಯಕ್ರಮದಲ್ಲಿ ಗಾಯಕರಾದ ದಿವ್ಯಾ ರಾಘವನ್, ಅನಿತಾ ಅಯ್ಯರ್, ವೆಂಕಟೇಶಮೂರ್ತಿ ಶಿರೂರ, ಮಂಜುನಾಥ್ ನಾಗಪ್ಪ, ಮಹಾಂತೇಶ ಮಮದಾಪುರ್ ರಂಜಿಸಲಿದ್ದಾರೆ.
ವಿಜಯಪುರದ ರಾಹುಲ್ ಮಹೀಂದ್ರಕರ್ ನಿರೂಪಣೆ ಮಾಡಲಿದ್ದು, ವಾದ್ಯಗೋಷ್ಠಿ ಮೇಲ್ವಿಚಾರಣೆಯನ್ನು ಸುಧೀರ್ ಮತ್ತು ಪ್ರಮೋದ್ ನಿರ್ವಹಿಸುವರು. ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಚತುರ್ಭಜ ತಂಡದ ವೆಂಕಟೇಶಮೂರ್ತಿ ಶಿರೂರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.