ನಿರ್ಮಾಪಕ ಆನೇಕಲ್‌ ಬಾಲರಾಜ್‌ ಪುತ್ರ ನಟ ಸಂತೋಷ್‌ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಸಾಗರ್‌ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಬೆಂಗಳೂರು: ನಿರ್ಮಾಪಕ ಆನೇಕಲ್‌ ಬಾಲರಾಜ್‌ ಪುತ್ರ ನಟ ಸಂತೋಷ್‌ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಸಾಗರ್‌ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. 

ಸಂತೋಷ್‌ ಅವರು ಜಾಂಡೀಸ್‌ಗೆ ತುತ್ತಾಗಿ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ ಸಾಗರ್‌ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈಗ ಐಸಿಯುನಲ್ಲಿರುವ ಸಂತೋಷ್‌ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿಲ್ಲ. ನಟ ಸಂತೋಷ್‌ ಅವರು ‘ಗಣಪ’, ‘ಕೆಂಪ’, ‘ಕರಿಯ 2’, ‘ಜನ್ಮ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಅವರ ನಟನೆಯ ‘ಬರ್ಕ್ಲಿ’ ಹಾಗೂ ‘ಸತ್ಯಂ’ ಸಿನಿಮಾ ತೆರೆಗೆ ಬರಬೇಕಿದೆ. ಒಂದು ವರ್ಷದ ಹಿಂದೆಯಷ್ಟೆ ಸಂತೋಷ್‌ ಅವರು ತಮ್ಮ ತಂದೆ ಆನೇಕಲ್‌ ಬಾಲರಾಜ್‌ ಅವರನ್ನು ಕಳೆದುಕೊಂಡಿದ್ದಾರೆ.

ನಟ ದರ್ಶನ್‌ ಅವರ ನಟನೆಯ ‘ಕರಿಯ’ ಚಿತ್ರವನ್ನು ಆನೇಕಲ್‌ ಬಾಲರಾಜ್‌ ನಿರ್ಮಿಸಿದ್ದರು. ‘ಜನ್ಮ’ ಚಿತ್ರದ ಮೂಲಕ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು.