ಸಾರಾಂಶ
ಬೆಂಗಳೂರಿನ ಒಬ್ಬ ಆಧುನಿಕ ತರುಣ ಪುಷ್ಪಗಿರಿ ಎಂಬ ಊರಿಗೆ ಹೊರಟು ನಿಂತಿದ್ದಾನೆ. ಅವನ ದಾರಿ ಕಾಡು ಹಾದಿ, ತಿರುವು ಮುರುವು ರಸ್ತೆ. ಆ ಜರ್ನಿಯಲ್ಲಿ ಅವನು ಏನೇನು ಎದುರಿಸುತ್ತಾನೆ, ಕೊನೆಗೆ ಅವನು ಕಾಣುವ ಸತ್ಯದರ್ಶನವೇ ಈ ಸಿನಿಮಾ.
ನಿರ್ದೇಶನ: ಲಿಖಿತ್ ಕುಮಾರ್
ತಾರಾಗಣ: ಮಾಹಿರ್ ಮೊಹಿಯುದ್ದೀನ್, ಹರಿಣಿ ಸುಂದರರಾಜನ್, ಮಾ. ಅನುರಾಗ್, ಚೈತ್ರಾ ಆಚಾರ್
ರೇಟಿಂಗ್: 3
ರಾಜೇಶ್
ಬೆಂಗಳೂರಿನ ಒಬ್ಬ ಆಧುನಿಕ ತರುಣ ಪುಷ್ಪಗಿರಿ ಎಂಬ ಊರಿಗೆ ಹೊರಟು ನಿಂತಿದ್ದಾನೆ. ಅವನ ದಾರಿ ಕಾಡು ಹಾದಿ, ತಿರುವು ಮುರುವು ರಸ್ತೆ. ಆ ಜರ್ನಿಯಲ್ಲಿ ಅವನು ಏನೇನು ಎದುರಿಸುತ್ತಾನೆ, ಕೊನೆಗೆ ಅವನು ಕಾಣುವ ಸತ್ಯದರ್ಶನವೇ ಈ ಸಿನಿಮಾ.
ಇದು ನಿರ್ದೇಶಕರ ಸಿನಿಮಾ. ಮತ್ತು ಒಬ್ಬ ನಟನ ಸಿನಿಮಾ. ಇದರ ಕಥೆಯನ್ನು ಹೇಳುವುದು ಸುಲಭ ಮತ್ತು ಬಹಳ ಕಷ್ಟ. ಅಷ್ಟು ಸಂಕೀರ್ಣವಾಗಿ ಕಥೆಯನ್ನು ಹೆಣೆದಿದ್ದಾರೆ. ಇಲ್ಲಿ ಬಾಲ್ಯ ಕಾಲದ ಹಿಂಸೆ ಇದೆ, ತಾರುಣ್ಯದ ಹುಮ್ಮಸ್ಸು ಇದೆ, ಮಾನಸಿಕ ತೊಳಲಾಟವಿದೆ, ಹಾರರ್ ಗುಣವಿದೆ, ಸಸ್ಪೆನ್ಸ್ ನೆರಳಿದೆ. ಒಟ್ಟಾರೆಯಾಗಿ ನಿಗೂಢವಾಗಿ ಕಥೆ ಸಾಗುತ್ತದೆ. ಕಥೆ ತೆರೆದುಕೊಳ್ಳುವುದು ಕೊನೆಯಲ್ಲಿ.
ಮೊದಲಾರ್ಧ ಬಹುತೇಕ ಪ್ರಯಾಣದಲ್ಲಿ ಕಳೆದರೆ, ದ್ವಿತೀಯಾರ್ಧ ಮನುಷ್ಯನೊಬ್ಬನ ಸರ್ವವೈಲ್ ಹೋರಾಟದ ಕಥನವಾಗುತ್ತದೆ. ಧಾವಂತದ ಬದುಕು, ಹಣದ ಹಿಂದೆ ಸಾಗುವ ಓಟ, ಮತ್ತಿಗೆ ಮರುಳಾಗುವ ಹಂಬಲ ಇವೆಲ್ಲವೂ ಎಷ್ಟು ನಶ್ವರ ಎಂದು ಸಾರುವುದೇ ಈ ಕಥೆಯ ಮೂಲ ಆಶಯ. ಆಗಾಗ ಸಾವರಿಸಿಕೊಂಡು, ಮುಖ್ಯವಾದದ್ದನ್ನು ಗಮನಿಸಲು ಸಾರುವುದು ಈ ಕಥೆಯ ಮೆಚ್ಚತಕ್ಕ ಅಂಶ. ಆದರೆ ಇದರ ಹೆಣಿಗೆಯೇ ಸ್ವಲ್ಪ ಸಂಕೀರ್ಣ ಇರುವುದರಿಂದ ಸಾವಧಾನದಿಂದ ನೋಡುವ ಅಗತ್ಯವಿದೆ. ಬಿಟ್ಟ ಸ್ಥಳಗಳನ್ನು ತುಂಬಬೇಕಿದೆ. ಅಲ್ಲಲ್ಲಿ ಬಿಟ್ಟು ಹೋದ ಡಾಟ್‌ಗಳನ್ನು ಕನೆಕ್ಟ್ ಮಾಡಬೇಕಿದೆ.
ದ್ವಿತೀಯಾರ್ಧದಲ್ಲಿ ‘ಕಾಸ್ಟ್ ಅವೇ’ ಸಿನಿಮಾ ನೆನಪಿಸುವ ಪ್ರಯತ್ನ ಮಾಡಿರುವ ನಿರ್ದೇಶಕ ಲಿಖಿತ್ ಮತ್ತು ಬಹುತೇಕ ಏಕಾಂಗಿ ಅಭಿನಯ ನೀಡಿರುವ ಮಾಹಿರ್ ಅವರ ಧೈರ್ಯ ಮತ್ತು ಪ್ರಯತ್ನ ಶ್ಲಾಘನೀಯ.