ಸಾರಾಂಶ
ನಟಿ ಅಪೂರ್ವ ಅವರು ತಮ್ಮ ಮುಂಬರುವ ಥ್ರಿಲ್ಲರ್ ಸಿನಿಮಾ 'ಕಣಂಜಾರು' ಬಗ್ಗೆ ಮಾತನಾಡಿದ್ದಾರೆ. ಕಥೆಯ ಮೇಲಿನ ಪ್ರೀತಿಯಿಂದಾಗಿ ಈ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಅವರು ಹೇಳಿದರು.
ಸಿನಿವಾರ್ತೆ‘
ಸಿನಿಮಾ ಆಯ್ಕೆ ಮಾಡುವ ಮೊದಲು ಕಥೆಗೆ ಆದ್ಯತೆ ನೀಡುತ್ತೇನೆ. ಕಣಂಜಾರು ಎಂಬ ಕಾರ್ಕಳ ಸಮೀಪದ ಊರಿನ ಹೆಸರನ್ನಿಟ್ಟುಕೊಂಡಿರುವ ಈ ಥ್ರಿಲ್ಲರ್ ಕೂಡ ಕಥೆಯ ಕಾರಣಕ್ಕೆ ಇಷ್ಟವಾಯ್ತು’ ಎಂದು ನಟಿ ಅಪೂರ್ವ ಹೇಳಿದ್ದಾರೆ.
ಇತ್ತೀಚೆಗೆ ಅವರ ನಟನೆಯ ‘ಕಣಂಜಾರು’ ಸಿನಿಮಾದ ‘ಪ್ರೇಮ ಶೃಂಗಾರ’ ಎಂಬ ಹಾಡು ಬಿಡುಗಡೆ ಆಗಿದೆ. ಆರ್.ಬಾಲಚಂದ್ರ ಈ ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಿ, ನಾಯಕನಾಗಿ ನಟಿಸಿದ್ದಾರೆ. ಬಾಲಚಂದ್ರ ಮಾತನಾಡಿ, ‘ನಿರ್ದೇಶಕ ತರುಣ್ ಸುಧೀರ್ ನಮ್ಮ ಚಿತ್ರತಂಡಕ್ಕೆ ಸಹಾಯ ಮಾಡಿದ್ದಾರೆ. ಅವರಿಗೆ ಈ ಹಾಡನ್ನು ಅರ್ಪಿಸುತ್ತಿದ್ದೇನೆ’ ಎಂದರು. ಮಾಸ್ತಿ ಸಂಭಾಷಣೆ ಬರೆದಿರುವ ಈ ಸಿನಿಮಾದಲ್ಲಿ ಮೇಘಾ, ಶರ್ಮಿತಾ ಗೌಡ ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತವಿದೆ.