ಅನುಕೂಲ್‌ ಏರ್‌ಫೋರ್ಸ್‌ನಲ್ಲಿದ್ದಾರೆ, ಏರ್‌ಪೋರ್ಟ್‌ನಲ್ಲಲ್ಲ : ವೈಷ್ಣವಿ ಗೌಡ

| Published : Apr 16 2025, 12:42 AM IST

ಅನುಕೂಲ್‌ ಏರ್‌ಫೋರ್ಸ್‌ನಲ್ಲಿದ್ದಾರೆ, ಏರ್‌ಪೋರ್ಟ್‌ನಲ್ಲಲ್ಲ : ವೈಷ್ಣವಿ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

ಕನ್ನಡಪ್ರಭ ಸಿನಿವಾರ್ತೆ

‘ನನ್ನ ಭಾವಿ ಪತಿ ಅನುಕೂಲ್‌ ಏರ್‌ಫೋರ್ಸ್‌ನಲ್ಲಿದ್ದಾರೆ, ಏರ್‌ಪೋರ್ಟ್‌ನಲ್ಲಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಅವರು ಏರ್‌ಪೋರ್ಟ್‌ನಲ್ಲಿದ್ದಾರೆ ಅಂತ ಕೆಲವರು ಬರೆದಿದ್ದು ಅವರಿಗೆ ಕೊಂಚ ಬೇಸರ, ಕೊಂಚ ತಮಾಷೆ ಅನಿಸಿದೆ.’

- ಹೀಗಂದಿದ್ದು ನಟಿ ವೈಷ್ಣವಿ ಗೌಡ. ಅವರ ನಿಶ್ಚಿತಾರ್ಥ ವಾಯುಸೇನೆ ಅಧಿಕಾರಿ ಅನುಕೂಲ್‌ ಮಿಶ್ರಾ ಜೊತೆಗೆ ಅದ್ದೂರಿಯಾಗಿ ನಡೆದಿದೆ.

ತನ್ನ ಎಂಗೇಜ್‌ಮೆಂಟ್‌ ಬಗ್ಗೆ ವಿವರ ನೀಡಿದ ವೈಷ್ಣವಿ, ‘ನನ್ನ ಎಂಗೇಜ್‌ಮೆಂಟ್‌ ಬಹಳ ಎಗ್ಸೈಟಿಂಗ್ ಆಗಿತ್ತು. ಮನಸ್ಸಿಗೆ ಬಹಳ ಖುಷಿ ಅನಿಸಿತು. ಉಳಿದಂತೆ ಸ್ಕ್ರಿಪ್ಟ್‌, ಸ್ಟೇಜ್‌ಗಳೇ ನನ್ನ ಜಗತ್ತು, ಆತನಿಗೆ ಆಕಾಶವೇ ಪ್ರಪಂಚ, ನಮ್ಮಿಬ್ಬರ ನಡುವೆ ವಿಧಿ ಪರ್ಫೆಕ್ಟ್‌ ಲವ್‌ ಸ್ಟೋರಿ ಬರೆದಿದ್ದೇ ಮಜಾ ಸಂಗತಿ’ ಎಂದಿದ್ದಾರೆ.ಕೋಟ್

ಅನುಕೂಲ್‌ ನನಗಾಗಿ ಇಂಟರ್‌ನೆಟ್‌ ಮೂಲಕ ಕನ್ನಡ ಕಲಿತು, ನಾನು ನಿನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ ವೈಷ್ಣವಿ ಅಂತ ಹೇಳಿದ್ದು ಬಹಳ ಇಷ್ಟವಾಯಿತು.

- ವೈಷ್ಣವಿ ಗೌಡ