ಸಾರಾಂಶ
ಅಕ್ಷಿತ್ ಎಂದಿದ್ದ ತನ್ನ ಹೆಸರನ್ನು ಆದಿತ್ಯ ಎಂದು ಬದಲಿಸಿಕೊಂಡಿದ್ದಾರೆ ಅಕ್ಷಿತ್ ಶಶಿಕುಮಾರ್.
ಸಿನಿವಾರ್ತೆ
ಹಿರಿಯ ನಟ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಹೊಸ ಸಿನಿಮಾ ‘ಕಾದಾಡಿ’. ಈ ಚಿತ್ರಕ್ಕಾಗಿ ಅಕ್ಷಿತ್ ಶಶಿಕುಮಾರ್ ಎಂದಿದ್ದ ತನ್ನ ಹೆಸರನ್ನು ಆದಿತ್ಯ ಎಂದು ಬದಲಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಈ ಸಿನಿಮಾ ಸಿದ್ಧಗೊಂಡಿದೆ. ಚಿತ್ರಕ್ಕೆ ಸತೀಶ್ ಮಾಲೆಂಪಾಟಿ ನಿರ್ದೇಶನ, ನಿರ್ಮಾಣವಿದೆ.
ಈ ಸಿನಿಮಾದ ‘ಕಲೆಯು ಇರಬೇಕು, ಮನೆಯು ಇರಬೇಕು’ ಎಂಬ ಹಾಡು ಇತ್ತೀಚೆಗೆ ಆದಿತ್ಯ ಮೂಸಿಕ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
ಬದುಕಿನಲ್ಲಿ ತ್ಯಾಗದ ಮಹತ್ವವನ್ನು ಹೇಳುವ ಕಥೆ ಚಿತ್ರದ್ದು. ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರು. ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್ ಮನೋಹರ್ ನಟಿಸಿದ್ದಾರೆ.
ಈ ಸಿನಿಮಾ ಜೂನ್‌ನಲ್ಲಿ ತೆರೆಗೆ ಬರಲಿದೆ.