ಸಾರಾಂಶ
ಅಫ್ಜಲ್ ನಿರ್ದೇಶನದ ಹೊಸತರ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ.
ಕನ್ನಡಪ್ರಭ ಸಿನಿವಾರ್ತೆ
ಅಫ್ಜಲ್ ಚೊಚ್ಚಲ ನಿರ್ದೇಶನದ ‘ಹೊಸತರ’ ಸಿನಿಮಾದ ಶೀರ್ಷಿಕೆ ಬಿಡುಗಡೆಯಾಗಿದೆ. ‘ಕಾಮಿಡಿ ಕಥಾಹಂದರದ ಚಿತ್ರದಲ್ಲಿ ಲವ್, ಸಸ್ಪೆನ್ಸ್, ಥ್ರಿಲ್ಲರ್‌ನ ಅಂಶಗಳೂ ಇವೆ. ಅಮೆರಿಕಾದ ಜೆಹೆಚ್‌ಜೆ ಸ್ಟುಡಿಯೋದಲ್ಲಿ ವಿಎಫ್ಎಕ್ಸ್ ನಡೆಯಲಿದೆ’ ಎಂದು ನಿರ್ದೇಶಕ ಅಫ್ಜಲ್ ತಿಳಿಸಿದ್ದಾರೆ. ಜೈವಿಜಯ್ ಪ್ರೊಡಕ್ಷನ್ಸ್ ಚಿತ್ರಕ್ಕೆ ಬಂಡವಾಳ ಹೂಡಲಿದೆ. ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ, ರಾಜೀವ್ ಗನೇಸನ್ ಛಾಯಾಗ್ರಹಣ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನವಿದೆ.