ಕಾನ್‌ ಚಿತ್ರೋತ್ಸವದಲ್ಲಿ ಬ್ಯಾಂಡೇಜ್‌ ಹಾಕ್ಕೊಂಡೇ ಐಶ್‌ ರ್‍ಯಾಂಪ್‌ ವಾಕ್‌

| Published : May 18 2024, 12:33 AM IST / Updated: May 18 2024, 07:23 AM IST

ಸಾರಾಂಶ

ಐಶ್ವರ್ಯಾ ರೈ ಕಾನ್ ಚಿತ್ರೋತ್ಸವದಲ್ಲಿ ಬ್ಯಾಂಡೇಜ್‌ನಲ್ಲೇ ರ್‍ಯಾಂಪ್‌ ವಾಕ್‌ ಮಾಡಿದ್ದಾರೆ.

 ಸಿನಿವಾರ್ತೆ

ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಈ ಬಾರಿಯ ಕಾನ್‌ ಸಿನಿಮೋತ್ಸವದಲ್ಲಿ ಕೈಗೆ ಬ್ಯಾಂಡೇಜ್‌ ಹಾಕಿಕೊಂಡು ರ್‍ಯಾಪ್‌ ವಾಕ್‌ ಮಾಡಿ ಸುದ್ದಿಯಲ್ಲಿದ್ದಾರೆ. 

ಈ ಬಾರಿ ಐಶ್ವರ್ಯಾ ರೈ ಬಚ್ಚನ್‌ ಬೆಕ್ಕಿನ ಕಣ್ಣಿನ ಸೌಂದರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಜೊತೆಗೆ ಐಶ್‌ ಧರಿಸಿದ್ದ ಕಪ್ಪು, ಬಿಳಿ ಹಾಗೂ ಬಂಗಾರ ವರ್ಣದ ಕಾಂಬಿನೇಶನ್‌ ಉಡುಗೆಯೂ ವಿಶ್ವದ ಗಮನ ಸೆಳೆದಿದೆ. ಡಿಯೋ ಫಲ್ಗುಣಿ ಶೇನ್‌ ಇದರ ವಿನ್ಯಾಸಕರು.