ಸಾರಾಂಶ
ಅಕ್ಕಮಹಾದೇವಿ ಜೀವನ ಪಯಣವನ್ನು ಹೇಳುವ ಅಕ್ಕಮಹಾದೇವಿ ಚಿತ್ರಕ್ಕೆ ಹಾಡುಗಳ ಧ್ವನಿ ಮುದ್ರಣ ಆಯಿತು.
ಕನ್ನಡಪ್ರಭ ಸಿನಿವಾರ್ತೆವಿಷ್ಣುಕಾಂತ್ ನಿರ್ದೇಶನ, ನಿರ್ಮಾಣದ ‘ಅಕ್ಕ ಮಹಾದೇವಿ’ ಚಿತ್ರಕ್ಕೆ ಹಂಸಲೇಖ ಸ್ಟುಡಿಯೋದಲ್ಲಿ ಇತ್ತೀಚೆಗೆ ಹಾಡುಗಳ ಧ್ವನಿ ಮುದ್ರಣ ಮಾಡುವ ಮೂಲಕ ಚಾಲನೆ ನೀಡಲಾಯಿತು. ಅಕ್ಕ ಮಹಾದೇವಿ ಜೀವನದ ಕತೆ ಆಧರಿಸಿದ ಸಿನಿಮಾ ಇದು. ರವಿಸುವರ್ಣ ಸಂಗೀತ, ಆರ್ ಪಳನಿ ಸೇನಾಪತಿ ಸಂಗೀತ ಚಿತ್ರಕ್ಕಿದೆ.
ಸಮಾಜ ಸುಧಾರಕ ಬಸಣ್ಣ ಹಾಗೂ ಅಕ್ಕಮಹಾದೇವಿ ಅವರು ರಚಿಸಿರುವ 21 ವಚನಗಳಿಗೆ 3 ಹಾಡುಗಳನ್ನು ರೂಪಿಸಿ ಲೈವ್ ವಾದ್ಯಗಳನ್ನು ಬಳಸಿ ಹಾಡುಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ. ಸುರಕ್ಷಾ, ಭವ್ಯ, ಬಿರಾದಾರ್, ಎಂ ಪಾಟೀಲ್ ನಟಿಸಲಿದ್ದಾರೆ. ನಿರ್ದೇಶನ, ನಿರ್ಮಾಣದ ಜತೆಗೆ ವಿಷ್ಣುಕಾಂತ್ ಚಿತ್ರದಲ್ಲಿ ನಟನೆ ಕೂಡ ಮಾಡಲಿದ್ದಾರೆ.