ಅನಿಮೇಟೆಡ್‌ ಬಾಹುಬಲಿ ನೋಡಕ್ಕೆ ಸಜ್ಜಾಗಿ

| Published : May 12 2024, 01:21 AM IST / Updated: May 12 2024, 07:56 AM IST

ಸಾರಾಂಶ

ಬಾಹುಬಲಿ ಕತೆ ಅನಿಮೇಷನ್‌ ರೂಪದಲ್ಲಿ ಬರುತ್ತಿದೆ. ಇದೇ ಮೇ.17ಕ್ಕೆ ಡಿಸ್ನಿ ಹಾಟ್‌ ಸ್ಟಾರ್‌ನಲ್ಲಿ ಪ್ರಸಾರಗೊಳ್ಳುತ್ತಿದೆ.

  ಸಿನಿವಾರ್ತೆ :  ಮತ್ತೆ ‘ಬಾಹುಬಲಿ’ ಸದ್ದು ಮಾಡಲು ಸಜ್ಜಾಗಿದೆ. ಅಮರೇಂದ್ರ ಬಾಹುಬಲಿ, ಬಲ್ಲಾಳದೇವ, ಕಟ್ಟಪ್ಪ, ಮಾಹಿಷ್ಮತಿ, ಸೇನಾನಿಗಳ ಸಾಹಸಗಳು ಮೇ.17ರಿಂದ ಪ್ರೇಕ್ಷಕರ ಮುಂದೆ ಬರಲಿವೆ. ಹೌದು, ಅನಿಮೇಟೆಡ್‌ ರೂಪದಲ್ಲಿ ಡಿಸ್ನಿ ಹಾಟ್‌ಸ್ಟಾರ್‌ದಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

 ಎ ಗ್ರಾಫಿಕ್ ಇಂಡಿಯಾ, ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ‘ಬಾಹುಬಲಿ ಕ್ರೌನ್ ಆಫ್ ಬ್ಲಡ್’ ಹೆಸರಿನ ಅನಿಮೇಟೆಡ್‌ ಚಿತ್ರ ನಿರ್ಮಾಣವಾಗಿದ್ದು, ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಹಾಗೂ ಶರದ್‌ ದೇವರಾಜನ್‌ ಕ್ರಿಯೆಟೀವ್‌ ಹೆಡ್‌ ಆಗಿದ್ದಾರೆ. ಜೀವನ್‌ ಜೆ ಕಾಂಗ್‌ ಹಾಗೂ ನವೀನ್‌ ಜಾನ್‌ ಜಂಟಿಯಾಗಿ ನಿರ್ದೇಶಿಸಿದ್ದಾರೆ.

ರಾಜಮೌಳಿ, ‘ನಾವು ಬಹುಬಲಿ ಜಗತ್ತನ್ನು ವಿಸ್ತರಿಸುವ ಕಥೆಯನ್ನು ರಚಿಸಿದ್ದೇವೆ. ಮಾಹಿಷ್ಮತಿಯ ಯೋಧರು ತಮ್ಮ ತಾಯ್ನಾಡನ್ನು ಉಳಿಸಲು ಒಂದಾದಾಗ ಸಾಮ್ರಾಜ್ಯಗಳ ನಡುವೆ ಮಹಾ ಸಮರವನ್ನು ಇಲ್ಲಿ ನೋಡಬಹುದು. ಇದೊಂದು ದೊಡ್ಡ ಸಾಹಸ ಅಂತಲೇ ಹೇಳಬೇಕು’ ಎನ್ನುತ್ತಾರೆ.