ಹೈಡ್ ಆ್ಯಂಡ್ ಸೀಕ್‌ ಕತೆ ನನಗಿಷ್ಟ: ಧನ್ಯಾ ರಾಮ್‌ಕುಮಾರ್‌

| Published : Mar 15 2024, 01:20 AM IST

ಸಾರಾಂಶ

ಅನೂಪ್ ರೇವಣ್ಣ, ಧನ್ಯಾ ರಾಮ್ ಕುಮಾರ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಹೈಡ್ ಆಂಡ್ ಸೀಕ್ ಬಿಡುಗಡೆ.

ಅನೂಪ್‌ ರೇವಣ್ಣ ಮತ್ತು ಧನ್ಯಾ ರಾಮ್‌ಕುಮಾರ್‌ ನಟಿಸಿರುವ, ಪುನೀತ್ ನಾಗರಾಜು ನಿರ್ದೇಶನದ ‘ಹೈಡ್‌ ಆ್ಯಂಡ್‌ ಸೀಕ್‌’ ಸಿನಿಮಾ ಇಂದು(ಮಾ.15) ಬಿಡುಗಡೆ ಆಗುತ್ತಿದೆ. ಅನೂಪ್ ರೇವಣ್ಣ ಕಿಡ್ನಾಪರ್‌ ಪಾತ್ರದಲ್ಲಿ ನಟಿಸಿದ್ದಾರೆ. ಅವರದು ನೆಗೆಟಿನ್‌ ಶೇಡ್‌ನಲ್ಲಿ ಹೀರೋ ಪಾತ್ರ. ಈ ಪಾತ್ರದ ಮತ್ತು ಚಿತ್ರದ ಕುರಿತು ಅನೂಪ್‌ ಭರವಸೆ ಇಟ್ಟುಕೊಂಡಿದ್ದಾರೆ. ಧನ್ಯಾ ರಾಮ್‌ಕುಮಾರ್‌ ಬಿಸಿನೆಸ್‌ಮ್ಯಾನ್‌ ಮಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಕುರಿತು ಧನ್ಯಾ ರಾಮ್‌ಕುಮಾರ್‌, ‘ನನಗೆ ಮಿಸ್ಟರಿ ಸಿನಿಮಾಗಳು ಇಷ್ಟ. ಈ ಚಿತ್ರದ ಕತೆ ಕೂಡ ತುಂಬಾ ಇಷ್ಟ. ಆಕರ್ಷಕವಾದ ರೀತಿಯಲ್ಲಿ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಕಿಡ್ನಾಪ್‌ಗೊಳಗಾದ ಪಾತ್ರ ನನ್ನದು. ಈ ಸಿನಿಮಾದಲ್ಲಿ ಟ್ರಾವೆಲ್‌ ಕೂಡ ಇದೆ. ಒಳ್ಳೆಯ ಅನುಭವ ಕೊಟ್ಟ ಸಿನಿಮಾ, ಭರವಸೆ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ.ವಸಂತ್ ಎಂ.ಕುಲಕರ್ಣಿ ಹಾಗೂ ಪುನೀತ್ ನಾಗರಾಜು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಮೈತ್ರಿ ಜಗ್ಗಿ, ಸೂರಜ್, ಬಲ ರಾಜವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ, ಅರವಿಂದ ರಾವ್ ತಾರಾಗಣದಲ್ಲಿದ್ದಾರೆ. ರಿಯೋ ಪಿ.ಜಾನ್ ಛಾಯಾಗ್ರಹಣ, ಸ್ಯಾಂಡಿ ಅಡಾಂಕಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ.