ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ನಿರಂಜನ್ ಸುಧೀಂದ್ರ ನಟಿಸಿದ್ದು, ಸದ್ದಿಲ್ಲದೆ ಚಿತ್ರಕ್ಕೆ ಶೂಟಿಂಗ್ ಮುಗಿದಿದೆ.

ಸಿನಿವಾರ್ತೆ

ಆ್ಯಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ನಿರ್ದೇಶನದ ಚಿತ್ರದಲ್ಲಿ ನಿರಂಜನ್‌ ಸುಧೀಂದ್ರ ನಾಯಕನಾಗಿ ನಟಿಸಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದು, ಈ ಚಿತ್ರದ ಟೈಟಲ್‌ ಇಂದು (ಅ.16)ಕ್ಕೆ ಅನಾವರಣಗೊಳಿಸಲಾಗುತ್ತಿದೆ.

ನಿರಂಜನ್‌ ಸುಧೀಂದ್ರ, ‘ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ನಟಿಸುವ ಅಕಾಶ ಸಿಕ್ಕಿದ್ದು ನನಗೆ ಸಂತೋಷ ತಂದಿದೆ. ಎಲ್ಲಾ ಕೆಲಸಗಳನ್ನು ಮುಗಿಸಿದ ನಂತರ ಚಿತ್ರದ ಬಗ್ಗೆ ಮಾತನಾಡೋಣ ಅಂದುಕೊಂಡ್ವಿ. ಈಗ ಶೂಟಿಂಗ್‌ ಮುಗಿಸಿದ್ದೇವೆ. ಇಂದು ಚಿತ್ರದ ಶೀರ್ಷಿಕೆ ಬಿಡುಗಡೆ ಆಗುತ್ತಿದೆ’ ಎನ್ನುತ್ತಾರೆ.