ಸಾರಾಂಶ
ಮಲಯಾಳಂನ ಎಆರ್‌ಎಂ ಚಿತ್ರ ಇದೇ ಸೆ.12ಕ್ಕೆ ಕನ್ನಡದಲ್ಲೂ ಬಿಡುಗಡೆ ಆಗುತ್ತಿದೆ. ಹೊಂಬಾಳೆ ಫಿಲಮ್ಸ್ ವಿತರಣೆ ಮಾಡುತ್ತಿದೆ.
ಸಿನಿವಾರ್ತೆ
ಮಲಯಾಳಂನ ‘ಎಆರ್‌ಎಂ’ ಚಿತ್ರ ಕನ್ನಡಕ್ಕೆ ಡಬ್ ಆಗಿದ್ದು, ಸೆ.12ಕ್ಕೆ ತೆರೆಗೆ ಬರಲಿದೆ. ಕನ್ನಡದಲ್ಲಿ ಹೊಂಬಾಳೆ ಫಿಲಮ್ಸ್ ವಿತರಣೆ ಮಾಡುತ್ತಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕನ್ನಡದ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಮಲಯಾಳಂನ ಟೊವಿನೋ ಥಾಮಸ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಕೃತಿ ಶೆಟ್ಟಿ ನಾಯಕಿ. 3ಡಿ ತಂತ್ರಜ್ಞಾನದಲ್ಲಿ ಚಿತ್ರ ಮೂಡಿ ಬಂದಿದೆ.
ನಿರ್ದೇಶಕ ಜಿತಿನ್ ಲಾಲ್, ‘ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಮೂರು ಕಾಲಘಟ್ಟದಲ್ಲಿ ಕತೆ ಸಾಗಲಿದ್ದು, ಚಿತ್ರದ ನಾಯಕ ಮೂರು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮ ಚಿತ್ರವನ್ನು ಹೊಂಬಾಳೆ ಫಿಲಮ್ಸ್ ಕನ್ನಡದಲ್ಲಿ ವಿತರಣೆ ಮಾಡುತ್ತಿರುವುದು ಖುಷಿ ಕೊಟ್ಟಿದೆ’ ಎಂದಿದ್ದಾರೆ.