ಆತ್ಮ ಚಿತ್ರದ ಟ್ರೇಲರ್‌ ಬಿಡುಗಡೆ

| Published : Feb 24 2024, 02:33 AM IST

ಸಾರಾಂಶ

ನಿಗೂಢ ಘೋಸ್ಟ್ ಕಥೆ ಹೇಳುವ ಚಿತ್ರ ಆತ್ಮದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

ಕನ್ನಡಪ್ರಭ ಸಿನಿವಾರ್ತೆ

ಹಾರರ್, ಥ್ರಿಲ್ಲರ್ ಕಥಾಹಂದರದ ‘ಆತ್ಮ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ನಿರ್ದೇಶಕರ ಸಂಘದ ಅಧ್ಯಕ್ಷ

ಎನ್ನಾರ್ ಕೆ ವಿಶ್ವನಾಥ್ ಟ್ರೇಲರ್‌ ಬಿಡುಗಡೆ ಮಾಡಿದರು. ಅನಿಲ್ ಸಿ ಆರ್ ಈ ಸಿನಿಮಾಕ್ಕೆ ಕಥೆ ಬರೆದು, ನಟಿಸಿ ನಿರ್ಮಿಸಿದ್ದಾರೆ. ಮುನೇಗೌಡ ಕಿತ್ತಗನೂರು ಸಹ ನಿರ್ಮಾಪಕರು.

ಎಸ್.ಆರ್ ಪ್ರಮೋದ್ ನಿರ್ದೇಶನ ಮಾಡಿದ್ದಾರೆ.ವ್ಯಕ್ತಿ ಸಾವು, ಶ್ರಾದ್ಧ, ಆತ್ಮ ಇತ್ಯಾದಿ ಅಂಶಗಳ ಮೇಲೆ ಸಿನಿಮಾ ಮಾಡಲಾಗಿದೆ. ಗೋಸ್ಟ್‌ ಹಂಟರ್‌ ಪಾತ್ರದ ಮೂಲಕ ನಿಗೂಢ ಕಥೆ ತೆರೆದುಕೊಳ್ಳುತ್ತದೆ ಎಂದು ಚಿತ್ರತಂಡ ಹೇಳಿದೆ. ಕಾವ್ಯ ಚಿತ್ರದ ನಾಯಕಿ. ದಿವ್ಯ, ಪುಷ್ಪ, ಪ್ರೀತಿ, ಏಲೇಶ್, ಬನ್ನೂರು ಶ್ರೀನಿವಾಸಗೌಡ ನಟಿಸಿದ್ದಾರೆ. ನಿತಿನ್‌ ರಾಜ್ ಸಂಗೀತ, ರಣಧೀರ್‌ ನಾಯಕ್ ಛಾಯಾಗ್ರಹಣವಿದೆ. ಸಂಕಲನ ಆಯುರ್, ಸಂಭಾಷಣೆ ಅಜಯ್‌ ವೇದಾಂತಿ ಅವರದು. ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಸಿಕ್ಕಿದೆ.