ಅವತಾರ ಪುರುಷ 2 ಸಿನಿಮಾ ಏಪ್ರಿಲ್ 5ರಂದು ಬಿಡುಗಡೆಯಾಗಲಿದೆ.

ಕನ್ನಡಪ್ರಭ ಸಿನಿವಾರ್ತೆಮಾ.22ಕ್ಕೆ ಬಿಡುಗಡೆ ಘೋಷಿಸಿದ್ದ ಶರಣ್, ಆಶಿಕಾ ರಂಗನಾಥ್ ನಟನೆಯ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಏ.5ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿದೆ.ಈ ಮೊದಲು ಮಾರ್ಚ್ 22ರಂದು ‘ಅ‍ವತಾರ ಪುರುಷ 2’, ಏಪ್ರಿಲ್ 5ರಂದು ‘ಛೂ ಮಂತರ್’ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಎರಡೆರಡು ಸಿನಿಮಾ ಒಟ್ಟೊಟ್ಟಿಗೆ ರಿಲೀಸ್ ಆಗುವುದು ಶರಣ್ ಅ‍ವರಿಗೆ ಯಾಕೋ ಸಮಾಧಾನ ತರಲಿಲ್ಲ ಎಂದು ಮೂಲಗಳು ತಿಳಿಸಿವೆ. ಆ ಕಾರಣಕ್ಕೆ ಸಿಂಪಲ್ ಸುನಿ ನಿರ್ದೇಶನದ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಅವತಾರ ಪುರುಷ 2’ ಏಪ್ರಿಲ್ 5ರಂದು ರಿಲೀಸ್ ಆಗಲಿದೆ. ಕರ್ವ ನವನೀತ್ ನಿರ್ದೇಶನದ ‘ಛೂ ಮಂತರ್’ ರಿಲೀಸ್ ಮುಂದಕ್ಕೆ ಹೋಗಿದ್ದು, ಸದ್ಯ ರಿಲೀಸ್ ದಿನಾಂಕ ಘೋಷಣೆ ಆಗಿಲ್ಲ.