ಸಾರಾಂಶ
ಸಿನಿವಾರ್ತೆ : ಶರಣ್ ನಟನೆಯ, ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ 2’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರ ಏಪ್ರಿಲ್ 5ಕ್ಕೆ ತೆರೆಗೆ ಬರುತ್ತಿದೆ.
ಈ ಸಂದರ್ಭದಲ್ಲಿ ಸಿಂಪಲ್ ಸುನಿ ಮಾತನಾಡಿ, ‘ಅವತಾರ ಪುರುಷ ಮೊದಲ ಭಾಗವನ್ನು ನೋಡಿ ಮೆಚ್ಚಿಕೊಂಡವರು ಎರಡನೇ ಭಾಗ ನೋಡಲು ಖಂಡಿತ ಬರುತ್ತಾರೆ. ಇಂಥದ್ದೊಂದು ಸಿನಿಮಾ ಆಗಲು ಪುಷ್ಕರ್ ಹಾಗೂ ಶರಣ್ ಕಾರಣ’ ಎಂದರು.
ಶರಣ್, ‘ಸುನಿ ಹಾಗೂ ಪುಷ್ಕರ್ ಕಾಂಬಿನೇಶನ್ ಸಿನಿಮಾ ಎಂದ ಮೇಲೆ ನಂಬಿಕೆ ಮತ್ತು ಭರವಸೆ ಮೂಡುತ್ತದೆ. ಒಳ್ಳೆಯ ಸಿನಿಮಾ ಮಾಡುವ ನಿರ್ದೇಶಕ ಮತ್ತು ನಿರ್ಮಾಪಕರ ಜತೆಗೆ ಕೆಲಸ ಮಾಡಿದ ತೃಪ್ತಿ ಇದೆ’ ಎಂದರು.
ಪುಷ್ಕರ್ ಮಲ್ಲಿಕಾರ್ಜುನಯ್ಯ, ‘ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬಂದಾಗ ಪ್ರೇಕ್ಷಕರು ನೋಡಿದರೆ ಮತ್ತಷ್ಟು ಒಳ್ಳೆಯ ಚಿತ್ರಗಳು ಬರುತ್ತವೆ’ ಎಂದರು.
ಚಿತ್ರದ ನಾಯಕಿ ಆಶಿಕಾ ರಂಗನಾಥ್ ಹಾಜರಿದ್ದರು. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಚಿತ್ರದಲ್ಲಿ ನಟಿಸಿದ್ದಾರೆ. ನಟರಾದ ನೆನಪಿರಲಿ ಪ್ರೇಮ್, ರಿಷಿ, ವಿಕ್ಕಿ ವರುಣ್, ಪ್ರವೀಣ್ ತೇಜ್ ಹಾಗೂ ನಿರ್ದೇಶಕ ಸಂತು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.