ಬಘೀರ ಸಿನಿಮಾದ ಹಾಡು ಬಿಡುಗಡೆ

 ಸಿನಿವಾರ್ತೆ

ಶ್ರೀಮುರಳಿ, ರುಕ್ಮಿಣಿ ವಸಂತ್‌ ನಟನೆಯ ‘ಬಘೀರ’ ಸಿನಿಮಾದ ‘ಪರಿಚಯವಾದೆ..’ ಹಾಡು ಹೊಂಬಾಳೆ ಫಿಲಂಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಖಡಕ್‌ ಪೊಲೀಸ್ ಆಫೀಸರ್‌ ಆಗಿ ಶ್ರೀಮುರಳಿ ಹಾಗೂ ಡಾಕ್ಟರ್‌ ಆಗಿ ರುಕ್ಮಿಣಿ ವಸಂತ್‌ ಪಾತ್ರಗಳು ಮೂಡಿಬಂದಿವೆ. ಪ್ರಮೋದ್‌ ಮರವಂತೆ ಅವರ ಸಾಹಿತ್ಯವಿರುವ ಈ ಹಾಡಿಗೆ ರಿತೇಶ್‌ ಜಿ ರಾವ್‌ ಧ್ವನಿಯಾಗಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತವಿದೆ.

ಡಾ. ಸೂರಿ ನಿರ್ದೇಶಕರು. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ ಕಿರಗಂದೂರು ಈ ಸಿನಿಮಾ ನಿರ್ಮಿಸಿದ್ದಾರೆ.

ಈ ಸಿನಿಮಾ ಅಕ್ಟೋಬರ್‌ 31ರಂದು ಬಿಡುಗಡೆಯಾಗಲಿದೆ.