ಭರ್ಜರಿ ಗಂಡು ಚಿತ್ರದ ಟ್ರೇಲರ್‌ ಬಿಡುಗಡೆ

| Published : Mar 19 2024, 12:50 AM IST

ಸಾರಾಂಶ

ಕಿರಣ್ ರಾಜ್ ನಟನೆಯ ಭರ್ಜರಿ ಗಂಡು ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

ಕಿರಣ್‌ ರಾಜ್‌, ಯಶಶಿಕುಮಾರ್‌ ನಟಿಸಿರುವ ‘ಭರ್ಜರಿ ಗಂಡು’ ಚಿತ್ರದ ಟ್ರೇಲರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಪ್ರಸಿದ್ಧ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮದನ್‌ ಗೌಡ ಜೆಎಸ್‌, ಅನಿಲ್‌ ಕುಮಾರ್‌ ಡಿ ಚಿತ್ರದ ನಿರ್ಮಾಣಕ್ಕೆ ಸಾಥ್‌ ಕೊಟ್ಟಿದ್ದಾರೆ. ನಿರ್ದೇಶಕ ಪ್ರಸಿದ್ಧ್‌ ಮಾತನಾಡಿ, ‘ಆ್ಯಕ್ಷನ್‌ ಸಿನಿಮಾ. ಟ್ರೇಲರ್‌ ನೋಡುತ್ತಿದ್ದಾಗ ನನಗೇ ರೋಮಾಂಚನ ಆಯಿತು. ಇಡೀ ಸಿನಿಮಾ ಇದೇ ಕ್ವಾಲಿಟಿ ಮತ್ತು ತಾಂತ್ರಿಕತೆಯಿಂದ ಕೂಡಿರುತ್ತದೆ. ಒಂದು ಹೊಸ ರೀತಿಯ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು’ ಎಂದರು.ಕಿರಣ್‌ ಮಾತನಾಡಿ, ‘ತುಂಬಾ ಹಿಂದೆ ಶುರು ಮಾಡಿದ ಸಿನಿಮಾ ಇದು. ಈ ಚಿತ್ರದ ನಂತರವೇ ನಾನು ಆ್ಯಕ್ಷನ್‌ ಹೀರೋ ಆಗಬೇಕು ಅನಿಸಿದ್ದು’ ಎಂದರು. ನಾಯಕಿ ಯಶಾ ಶಿವಕುಮಾರ್‌, ಸಂಗೀತ ಸಂಯೋಜನೆ ಮಾಡಿರುವ ತೆಲುಗಿನ ಗುಮ್ಮಿನೇನಿ ವಿಜಯ್, ಛಾಯಾಗ್ರಾಹಕ ಕಿಟ್ಟಿ ಕೌಶಿಕ್‌, ಅಣಜಿ ನಾಗರಾಜ್‌ ಇದ್ದರು.