ಸಾರಾಂಶ
ಶ್ರೀಶ್ರೀ ರವಿಶಂಕರ ಗುರೂಜಿ ಬಯೋಪಿಕ್ ‘ವೈಟ್’ನ ಚಿತ್ರೀಕರಣ ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ ಆರಂಭವಾಗಿದೆ
ಸಿನಿವಾರ್ತೆ
ಶ್ರೀಶ್ರೀ ರವಿಶಂಕರ ಗುರೂಜಿ ಬಯೋಪಿಕ್ ‘ವೈಟ್’ನ ಚಿತ್ರೀಕರಣ ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ ಆರಂಭವಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ‘ಟ್ವೆಲ್ತ್ ಫೇಲ್’ ಖ್ಯಾತಿಯ ನಟ ವಿಕ್ರಮ್ ಮಾಸಿ ಈ ಚಿತ್ರದಲ್ಲಿ ರವಿಶಂಕರ ಗುರೂಜಿ ಪಾತ್ರ ನಿರ್ವಹಿಸುತ್ತಿದ್ದಾರೆ.
52 ವರ್ಷಗಳ ಕಾಲ ಕೊಲಂಬಿಯನ್ ಸರ್ಕಾರ ಹಾಗೂ ಎಫ್‌ಎಆರ್‌ಸಿ ಬಣದ ನಡುವೆ ನಡೆದ ಸಂಘರ್ಷದ ಕುರಿತಾಗಿ ಇಲ್ಲಿ ಚಿತ್ರೀಕರಣ ನಡೆಯಲಿದೆ. ಈ ಸಂಘರ್ಷಕ್ಕೆ ರವಿಶಂಕರ ಗುರೂಜಿ ಕೊನೆ ಹಾಡಿದ್ದರು. ‘ವೈಟ್’ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ಹಾಗೂ ಮಹಾವೀರ ಜೈನ್ ನಿರ್ಮಿಸುತ್ತಿದ್ದಾರೆ. ಮಾಂಟೂ ಬಸ್ಸಿ ನಿರ್ದೇಶನ ಮಾಡುತ್ತಿದ್ದಾರೆ