ರಂಗಭೂಮಿ ಹಿನ್ನೆಲೆಯ ಟೈಮ್‌ ಟ್ರಾವೆಲಿಂಗ್‌ ಸ್ಟೋರಿ

| Published : Mar 09 2024, 01:33 AM IST

ರಂಗಭೂಮಿ ಹಿನ್ನೆಲೆಯ ಟೈಮ್‌ ಟ್ರಾವೆಲಿಂಗ್‌ ಸ್ಟೋರಿ
Share this Article
  • FB
  • TW
  • Linkdin
  • Email

ಸಾರಾಂಶ

ಟೈಮ್‌ ಟ್ರಾವೆಲಿಂಗ್‌ ಸ್ಟೋರಿ ಬ್ಲಿಂಕ್‌ ಸಿನಿಮಾದ ವಿಮರ್ಶೆ

ಬ್ಲಿಂಕ್‌ತಾರಾಗಣ: ದೀಕ್ಷಿತ್‌ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್‌, ಮಂದಾರ ಬಟ್ಟಲಹಳ್ಳಿ, ಸುರೇಶ್‌ ಆನಗಳ್ಳಿ, ವಜ್ರಧೀರ್‌ ಜೈನ್‌ನಿರ್ದೇಶನ: ಶ್ರೀನಿಧಿ ಬೆಂಗಳೂರುರೇಟಿಂಗ್‌: 3- ಪ್ರಿಯಾ ಕೆರ್ವಾಶೆಇದೊಂದು ಟೈಮ್‌ ಟ್ರಾವೆಲಿಂಗ್‌ ಕಥೆ. ಸಾಮಾನ್ಯ ಹುಡುಗನ ಕಥೆಯಾಗಿ ಶುರುವಾಗಿ ಎಲ್ಲೆಲ್ಲೋ ಕರೆದೊಯ್ದು ಮತ್ತೊಂದು ದಡ ಸೇರಿಸುವ ಈ ಸಿನಿಮಾ ತರ್ಕ, ನಂಬಿಕೆಗಳನ್ನು ಮೀರಿ ನಿಲ್ಲುವ ಸಬ್ಜೆಕ್ಟ್‌ ಅನ್ನು ಕನ್ವಿನ್ಸಿಂಗ್‌ ಆಗಿ ನಿರೂಪಿಸುವಲ್ಲಿ ಯಶ ಕಂಡಿದೆ. ಇದು ರಂಗಭೂಮಿ ಹಿನ್ನೆಲೆಯ ಹುಡುಗರು ಮಾಡಿರುವ ಸಿನಿಮಾ. ರಂಗಭೂಮಿ ಎಳೆಯೊಂದು ಆರಂಭದಿಂದ ಕೊನೇವರೆಗೂ ಟ್ರಾವೆಲ್‌ ಮಾಡಿ ಕೊನೆಗೆ ಇಡೀ ಕಥೆಗೇ ಸ್ವಷ್ಟ ರೂಪ ನೀಡುತ್ತದೆ. ಇದನ್ನು ಸಾಧ್ಯವಾಗಿಸಿದ್ದು ಥಿಯೇಟರ್‌ ಹುಡುಗರ ಕಸುಬುಗಾರಿಕೆ.ನಮ್ಮ ನಿಮ್ಮ ನಡುವೆ ಇರುವಂಥಾ ಪಕ್ಕಾ ಮಿಡಲ್‌ ಕ್ಲಾಸ್‌ ಹುಡುಗ ಅಪೂರ್ವ. ನಾಟಕ ಟೀಮ್‌, ಅಲ್ಲಿನ ಗೆಳೆಯರು, ಪ್ರೀತಿಸುವ ಹುಡುಗಿ, ಕಾಡುವ ನಿರುದ್ಯೋಗದ ನಡುವೆ ಬದುಕುತ್ತಿರುತ್ತಾನೆ. ಒಮ್ಮೆ ತನ್ನದೇ ರೆಪ್ಲಿಕಾವೊಂದು ಜೀವತಳೆದು ತನ್ನ ಬದುಕಿನಲ್ಲಿ ಹಣಕಿ ಹಾಕುವುದು ಆತನ ಅರಿವಿಗೆ ಬರುತ್ತದೆ. ಅದರ ಹಿಂದೆ ಹೋದವನಿಗೆ ಎದುರಾಗುವುದೇ ಟೈಮ್‌ ಟ್ರಾವೆಲಿಂಗ್‌ ಎಂಬ ವಿಲಕ್ಷಣ ಜಗತ್ತು. ಅಲ್ಲಿನ ಈತನ ಅನುಭವಗಳೇ ಸಿನಿಮಾದ ಮುಖ್ಯ ಎಳೆ. ಜೊತೆಗೆ ಸಂಬಂಧಗಳ ಸಂಕೀರ್ಣತೆ, ಭಾವನೆಗಳ ವೈರುಧ್ಯವೂ ಕತೆಗೆ ರಕ್ತ ಮಾಂಸ ತುಂಬಿದೆ.ನಾಟಕದ ತಂಡದಲ್ಲಿ ಎಲ್ಲರ ಜೊತೆ ಕೂತು ರಿಹರ್ಸಲ್‌ ಮಾಡುತ್ತಿದ್ದ ಕಲಾವಿದನೊಬ್ಬ ಇದ್ದಕ್ಕಿದ್ದಂತೆ ಸ್ಟೇಜ್‌ ಮೇಲೇರಿ ಬೇರೊಂದು ಪಾತ್ರವಾಗಿ ಬೆಳೆಯುತ್ತಾ ಹಲವು ಆಯಾಮಗಳನ್ನು ಪಡೆದಂಥಾ ಅನುಭವವನ್ನು ಈ ಸಿನಿಮಾ ಕಟ್ಟಿಕೊಡುತ್ತದೆ.ನಡುವೆ ಕಣ್ಣು ಬ್ಲಿಂಕ್‌ ಮಾಡುವ ಹಾಗಿಲ್ಲ. ಮಾಡಿದರೆ ಕತೆಯ ಸೂಕ್ಷ್ಮ ಹೆಣಿಗೆಯೊಂದು ಮಿಸ್‌ ಆಗಿ ಮತ್ತೆ ಕಥೆಗೆ ಕನೆಕ್ಟ್‌ ಆಗುವುದು ಕಷ್ಟ.ಪ್ರಸನ್ನ ಕುಮಾರ್‌ ಅವರ ಬ್ಯಾಗ್ರೌಂಡ್‌ ಸ್ಕೋರ್‌, ಹಾಡುಗಳು ಕಥೆಯನ್ನು ಮತ್ತಷ್ಟು ತೀವ್ರವಾಗಿಸುತ್ತವೆ. ಸಾಮಾನ್ಯರ ಕಥೆಯನ್ನು ಹೇಳುತ್ತಲೇ ಅದನ್ನು ಅಸಾಮಾನ್ಯ ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದರಲ್ಲಿ ಯುವ ನಿರ್ದೇಶಕ ಶ್ರೀನಿಧಿ ಬೆಂಗಳೂರು ಜಾಣ್ಮೆ ಇದೆ. ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.