ಸಾರಾಂಶ
ಸನ್ನಿ ಲಿಯೋನ್ ಹಾಗೂ ಡೇನಿಯಲ್ ಮಾಲ್ಡೀವ್ಸ್‌ನಲ್ಲಿ ಮರು ಮದುವೆಯಾಗಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಬಾಲಿವುಡ್ ನಟಿ ಸನ್ನಿ ಲಿಯೋನ್ ತನ್ನ ಪತಿ ಡೇನಿಯಲ್ ವೆಬರ್ ಜೊತೆಗೆ ಮರು ಮದುವೆಯಾಗಿದ್ದಾರೆ. 13 ವರ್ಷಗಳ ಹಿಂದೆ ಡೇನಿಯನ್ ವೆಬರ್ ಜೊತೆ ವಿವಾಹವಾಗಿದ್ದ ಸನ್ನಿ ಲಿಯೋನ್ ಈಗ ಮತ್ತೊಮ್ಮೆ ಮಾಲ್ಡೀವ್ಸ್‌ನಲ್ಲಿ ಅವರನ್ನು ಮದುವೆಯಾಗಿದ್ದಾರೆ. ಮಕ್ಕಳಾದ ನಿಶಾ, ನೋಹ್ ಮತ್ತು ಆಶರ್ ಈ ವಿವಾಹಕ್ಕೆ ಸಾಕ್ಷಿಯಾದರು. ಈ ವಿವಾಹ ತಮ್ಮಿಬ್ಬರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದಾಗಿ ದಂಪತಿ ಹೇಳಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಸಿನಿಮಾದಲ್ಲಿ ಸನ್ನಿ ನಟಿಸಿದ್ದಾರೆ. ಡಿ.20ಕ್ಕೆ ಈ ಚಿತ್ರ ರಿಲೀಸ್ ಆಗಲಿದೆ.