ಚೈತ್ರಾ ಆಚಾರ್‌ ನಟನೆಯ ಬ್ಲಿಂಕ್‌ ಇಂದು ರಿಲೀಸ್‌

| Published : Mar 08 2024, 01:48 AM IST

ಸಾರಾಂಶ

ಚೈತ್ರಾ ಆಚಾರ್‌ ಮುಖ್ಯಪಾತ್ರದಲ್ಲಿ ನಟಿಸಿರುವ ದೀಕ್ಷಿತ್‌ ಶೆಟ್ಟಿ ನಾಯಕನಾಗಿರುವ ಸೈಫೈ ಸಿನಿಮಾ ಬ್ಲಿಂಕ್‌ ಇಂದು ತೆರೆ ಕಾಣುತ್ತಿದೆ.

ಚೈತ್ರಾ ಆಚಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬ್ಲಿಂಕ್‌’ ಸಿನಿಮಾ ಇಂದು ತೆರೆ ಕಾಣುತ್ತಿದೆ. ದೀಕ್ಷಿತ್ ಶೆಟ್ಟಿ ಈ ಸೈನ್ಸ್‌ ಫಿಕ್ಷನ್‌ನ ನಾಯಕ. ರವಿಚಂದ್ರ ಎ ಜೆ ಚಿತ್ರ ನಿರ್ಮಿಸಿದ್ದಾರೆ. ನಿರ್ದೇಶಕ ಶ್ರೀನಿಧಿ ಬೆಂಗಳೂರು ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.ಇತ್ತೀಚೆಗೆ ಚಿತ್ರತಂಡ ಟ್ರೆಂಡಿ ಹಾಡುಗಳ ಸಾಲನ್ನು ಬಳಸಿ ವಿಭಿನ್ನವಾಗಿ ಚಿತ್ರದ ಪ್ರಚಾರ ಮಾಡಿದರು. ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆ ಆಗಿದ್ದು ಜನಮೆಚ್ಚುಗೆ ಗಳಿಸಿವೆ. ವಿಶಿಷ್ಟ ಕಂಟೆಂಟ್‌ ಇರುವ ಸಿನಿಮಾ ಎಂಬ ಕುತೂಹಲ ಹುಟ್ಟಿಸಿದೆ. ಆ ಹುಮ್ಮಸ್ಸಿನಿಂದಲೇ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡುತ್ತಿದೆ.

ಮಂದಾರ ಬಟ್ಟಲಹಳ್ಳಿ ಈ ಸಿನಿಮಾದ ನಾಯಕಿ. ವಜ್ರಧೀರ್ ಜೈನ್, ಗೋಪಾಲಕೃಷ್ಣ ದೇಶಪಾಂಡೆ , ಕಿರಣ್ ನಾಯ್ಕ್, ಮುರಳಿ ಶೃಂಗೇರಿ , ಸುರೇಶ್ ಆನಗಳ್ಳಿ ನಟಿಸಿದ್ದಾರೆ. ಪ್ರಸನ್ನ ಕುಮಾರ್ ಸಂಗೀತ ನಿರ್ದೇಶನ, ಅವಿನಾಶ್‌ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಜಾಗೀರ್‌ದಾರ್‌ ಸಂಕಲನ ಚಿತ್ರಕ್ಕಿದೆ.