ಕನ್ನಡದಲ್ಲಿ ಇಂಥಾ ಪ್ರಯೋಗದ ಚಿತ್ರ ಬಂದಿಲ್ಲ: ಅನಿರುದ್ಧ್‌

| Published : Jun 14 2024, 01:01 AM IST / Updated: Jun 14 2024, 05:48 AM IST

ಕನ್ನಡದಲ್ಲಿ ಇಂಥಾ ಪ್ರಯೋಗದ ಚಿತ್ರ ಬಂದಿಲ್ಲ: ಅನಿರುದ್ಧ್‌
Share this Article
  • FB
  • TW
  • Linkdin
  • Email

ಸಾರಾಂಶ

ಶೆಫ್ ಚಿದಂಬರ ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಅನಿರುದ್ಧ್ ಮಾತನಾಡಿದ್ದಾರೆ.

- ಆರ್‌. ಕೇಶವಮೂರ್ತಿ

ಇದು ಯಾವ ರೀತಿಯ ಸಿನಿಮಾ?

ಕನ್ನಡದ ಮಟ್ಟಿಗೆ ಒಂದು ವಿನೂತನ ಮತ್ತು ಪ್ರಯೋಗಾತ್ಮಕ ಸಿನಿಮಾ. ಈ ರೀತಿಯ ಕತೆ ಮತ್ತು ಪ್ರಯೋಗದ ಚಿತ್ರ ಕನ್ನಡದಲ್ಲಿ ಬಂದಿಲ್ಲ. ಇದೊಂದು ವಿಶೇಷವಾದ ಚಿತ್ರ.

ಪ್ರಯೋಗ ಎನ್ನುವ ಕಾರಣಕ್ಕೇ ವಿಶೇಷ ಚಿತ್ರನಾ?

ಹಾಗಲ್ಲ. ಇದು ಕೊಲೆಗಳ ಸುತ್ತ ನಡೆಯುವ ಕತೆಯಾದರೂ ಎಲ್ಲೂ ರಕ್ತ ತೋರಿಸಲ್ಲ. ಒಂದು ಕ್ರೈಮ್‌ ಕತೆಯನ್ನು ಡಾರ್ಕ್‌ ಹ್ಯೂಮರ್‌ ನೆರಳಿನಲ್ಲಿ ನಿರೂಪಿಸಲಾಗಿದೆ. ಎಲ್ಲಾ ಮನರಂಜನಾ ಅಂಶಗಳೂ ಚಿತ್ರದಲ್ಲಿವೆ. ಈ ಕಾರಣಕ್ಕೂ ನನಗೆ ಇದೊಂದು ವಿಶೇಷವಾದ ಸಿನಿಮಾ ಅನಿಸಿದೆ.

ತಾಂತ್ರಿಕತೆಯ ಭಿನ್ನತೆ ಏನಿತೆ?

ಇಡೀ ಸಿನಿಮಾ ಅವಧಿ 1 ಒಂದು ಗಂಟೆ 45 ನಿಮಿಷ ಮಾತ್ರ. ಅಂದರೆ ಎಲ್ಲೂ ಬೋರ್‌ ಆಗದಂತೆ ತುಂಬಾ ವೇಗವಾಗಿ ಕತೆಯನ್ನು ನಿರೂಪಿಸಲಾಗಿದೆ. ನಿರ್ದೇಶಕ ಎಂ ಆನಂದರಾಜ್‌ ಅವರು ಸ್ಕ್ರೀನ್‌ ಮೇಲೆ ಯಾವ ಕತೆ ಹೇಳಬೇಕು ಎನ್ನುವ ತಯಾರಿ ಮಾಡಿಕೊಂಡಿದ್ದರು. ಅವರ ತಯಾರಿಯೇ ಚಿತ್ರದ ಕ್ವಾಲಿಟಿಯನ್ನು ಹೆಚ್ಚಿಸಿದೆ.

ಈ ಚಿತ್ರದ ಕತೆ ನಿಮಗೆ ಕನೆಕ್ಟ್‌ ಆಗಿದ್ದು ಯಾಕೆ?

ನಮ್ಮ ಕನ್ನಡದಲ್ಲಿ ಈ ರೀತಿಯ ಕತೆ ಬಂದಿಲ್ಲ. ಮತ್ತು ನಾನೂ ಕೂಡ ಅಂತ ಕತೆಗಳಲ್ಲಿ ನಟಿಸಿಲ್ಲ ಎನ್ನುವ ಅಂಶವೇ ನನಗೆ ಈ ಕತೆಯನ್ನು ಕನೆಕ್ಟ್‌ ಮಾಡಿಸಿತು. ಇದರ ಜತೆಗೆ ಚಿತ್ರತಂಡದ ಪೂರ್ವ ತಯಾರಿ, ಸಿನಿಮಾ ಕಲರ್‌ ಹೀಗೆ ಪ್ರತಿಯೊಂದರ ಬಗ್ಗೆಯೂ ಪೂರ್ವ ತಯಾರಿ ಮಾಡಿಕೊಂಡೇ ಬಂದಿದ್ದರು. ಇದು ಕೂಡ ನಾನು ಚಿತ್ರ ಒಪ್ಪಲು ಕಾರಣ ಆಯಿತು.

ಕತೆ ಒಂದು ಸಾಲಿನಲ್ಲಿ ಹೇಳುವುದಾದರೆ?

ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ.

ಶೆಫ್‌ ಪಾತ್ರಧಾರಿಯಾಗಿರುವ ನೀವು ಬರೀ ಅಡುಗೆ ಮಾತ್ರ ಮಾಡಲ್ಲ ಅನಿಸುತ್ತದಲ್ಲ?

ಅಡುಗೆ ಜತೆಗೆ ಬೇರೆ ಬೇರೆ ಕೆಲಸವನ್ನೂ ಮಾಡುತ್ತೇನೆ. ನಾನು ಮಾಡೋ ಬಿರಿಯಾರಿ, ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ ಏನು ನಂಟು, ಇಷ್ಟಕ್ಕೂ ಯಾವುದರಿಂದ ಬಿರಿಯಾನಿ ಮಾಡುತ್ತೇನೆ ಎಂಬುದು ಕೂಡ ಚಿತ್ರದ ಒಂದು ಕುತೂಹಲಕಾರಿ ಅಂಶ. ಹೀಗಾಗಿ ಇಲ್ಲಿ ಶೆಫ್‌, ತುಂಬಾ ಕಿಲಾಡಿಯಾಗಿರುತ್ತಾನೆ.