ಸಾರಾಂಶ
ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್ ಸೀರೀಸ್ ಸಿಟಾಡೆಲ್‌ನ ಹಿಂದಿ ರೀಮೇಕ್ ಸಿಟಾಡೆಲ್ ಹನಿ ಬನ್ನಿ ಟ್ರೇಲರ್ ಬಿಡುಗಡೆಯಾಗುತ್ತಿದೆ.
ಕನ್ನಡಪ್ರಭ ಸಿನಿವಾರ್ತೆನಟಿ ಸಮಂತಾ ಮತ್ತು ವರುಣ್ ಧವನ್ ನಟನೆಯ ‘ಸಿಟಡೆಲ್ ಹನಿ ಬನ್ನಿ’ ವೆಬ್‌ಸಿರೀಸ್‌ನ ಟ್ರೇಲರ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆ ಆಗಿದೆ. ಇದು 2023ರಲ್ಲಿ ಹಾಲಿವುಡ್‌ನಲ್ಲಿ ಬಿಡುಗಡೆಯಾಗಿದ್ದ ಪ್ರಿಯಾಂಕ ಚೋಪ್ರಾ ನಟನೆಯ ‘ಸಿಟಡೆಲ್’ನ ಹಿಂದಿ ರೀಮೇಕ್ ಆಗಿದೆ. ‘ಫ್ಯಾಮಿಲಿ ಮ್ಯಾನ್’ ಸಿರೀಸ್ ಮೂಲಕ ಜನಪ್ರಿಯರಾದ ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಈ ವೆಬ್‌ಸೀರೀಸ್ ಅನ್ನು ನಿರ್ದೇಶಿಸಿದ್ದಾರೆ.
ಇದರಲ್ಲಿ ಸಮಂತಾ ಆ್ಯಕ್ಷನ್ ಕ್ವೀನ್ ಆಗಿ ಮಿಂಚಿದ್ದು, ಗೂಢಚಾರರ ವಿರುದ್ಧ ಹೋರಾಡುವ ತಾಯಿಯೊಬ್ಬಳ ಪಾತ್ರದಲ್ಲಿ ನಟಿಸಿದ್ದಾರೆ. ಪ್ರೈಮ್‌ನಲ್ಲಿ ನ.7ರಿಂದ ಈ ವೆಬ್‌ಸೀರೀಸ್ ಸ್ಟ್ರೀಮಿಂಗ್ ಆಗಲಿದೆ.