ಸಾರಾಂಶ
ಮೇ 14 ಅಥವಾ 15ರಿಂದ ದರ್ಶನ್ ನಟನೆಯ ಡೆವಿಲ್ ಸಿನಿಮಾ ಕಿಕ್‌ಸ್ಟಾರ್ಟ್ಸ್ ಆಗೋದಾಗಿ ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದಾರೆ.
ಸಿನಿವಾರ್ತೆ
ಮೇ 15ರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಡೆವಿಲ್ ದಿ ಹೀರೋ’ ಸಿನಿಮಾ ಶೂಟಿಂಗ್ ಮತ್ತೆ ಆರಂಭ ಆಗಲಿದೆ. ಮೇ 10ಕ್ಕೆ ಈಗಾಗಲೇ ರಿಲೀಸ್ ಆಗಿರುವ ಸಿನಿಮಾ ಟೀಸರ್‌ನ ಮೇಕಿಂಗ್ ವೀಡಿಯೋ ಬಿಡುಗಡೆಯಾಗಲಿದೆ.
ನಿರ್ದೇಶಕ ಪ್ರಕಾಶ್ ವೀರ್, ‘ದರ್ಶನ್ ಅವರ ಎಡಗೈ ಸರ್ಜರಿ ಹಿನ್ನೆಲೆಯಲ್ಲಿ ತಿಂಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಮೇ 14 ಅಥವಾ 15ರಿಂದ ಪುನರಾರಂಭವಾಗಲಿದೆ. ವಾರಗಳ ಕಾಲ ಈ ಶೆಡ್ಯೂಲ್ ಮುಂದುವರಿಯಬಹುದು.
ಚಿತ್ರೀಕರಣ ನಿಧಾನವಾಗಿರುವ ಕಾರಣ ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗುವ ಬಗ್ಗೆ ಅನುಮಾನವಿದೆ. ನಾಯಕಿ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದ್ದಾರೆ.