ಮಾ.22ರಿಂದ ದರ್ಶನ್‌ ನಟನೆಯ ಡೆವಿಲ್‌ ದಿ ಹೀರೋ ಶೂಟಿಂಗ್‌

| Published : Mar 18 2024, 01:54 AM IST

ಮಾ.22ರಿಂದ ದರ್ಶನ್‌ ನಟನೆಯ ಡೆವಿಲ್‌ ದಿ ಹೀರೋ ಶೂಟಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ದರ್ಶನ್‌ ನಟನೆಯ ದಿ ಡೆವಿಲ್‌ ಸಿನಿಮಾದ ಚಿತ್ರೀಕರಣ ಮಾ.22ರಿಂದ ಆರಂಭವಾಗಲಿದೆ.

ಕನ್ನಡಪ್ರಭ ಸಿನಿವಾರ್ತೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಶೂಟಿಂಗ್‌ ಈ ವಾರದಿಂದ ಆರಂಭವಾಗಲಿದೆ. ಮಾ.22ರ ಶುಕ್ರವಾರದಂದು ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್‌ ಶುರುವಾಗಲಿದೆ ಎನ್ನಲಾಗಿದೆ. ಇದೊಂದು ಮಾಸ್‌ ಎಂಟರ್‌ಟೈನರ್‌ ಆಗಿದ್ದು ಪ್ರಕಾಶ್‌ ವೀರ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ‘ತಾರಕ್‌’ ಸಿನಿಮಾ ಬಳಿಕ ಪ್ರಕಾಶ್‌ ಹಾಗೂ ದರ್ಶನ್‌ ಕಾಂಬಿನೇಶನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು.

ಜೈಮಾತಾ ಕಂಬೈನ್ಸ್ ಪ್ರಸ್ತುತಿ ಹಾಗೂ ವೈಷ್ಣೋ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿವೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣವಿದೆ. ಇದೇ ಮೊದಲ ಬಾರಿ ಅಜನೀಶ್ ಲೋಕನಾಥ್ ಅವರು ದರ್ಶನ್‌ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್‌ ಆರಂಭಕ್ಕೂ ಮುನ್ನವೇ ಆಡಿಯೋ ರೈಟ್ಸ್‌ ಸರೆಗಮ ಆಡಿಯೋ ಪಾಲಾಗಿದೆ ಎನ್ನಲಾಗಿದೆ.

ಡೆವಿಲ್ ಚಿತ್ರದ ಬಳಿಕ ದರ್ಶನ್, ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಬಳಿಕ ‘ಸಿಂಧೂರ ಲಕ್ಷ್ಮಣ’ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ತರುಣ್‌ ಕಿಶೋರ್‌ ಸುಧೀರ್‌ ಇದರ ನಿರ್ದೇಶಕರು.