ಒಮ್ಮೆ ಭೈರತಿ ರಣಗಲ್‌ ಫ್ಯಾನ್ಸ್‌ ಟೀಮ್‌ನವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಅಲ್ಲಿ ಸೆಲೆಬ್ರೇಶನ್‌ಗೆ ಗನ್‌, ಮಚ್ಚು ಹಿಡ್ಕೊಂಡು ಹುಡುಗರು ಡ್ಯಾನ್ಸ್‌ ಮಾಡುತ್ತಿದ್ದರು. ಒಬ್ಬ ಮಚ್ಚು ತಂದು ನನ್ನ ಕೈಗೆ ಕೊಟ್ಟು ಹಿಡಿಸಿದ.

ಸಿನಿವಾರ್ತೆ

‘ಒಮ್ಮೆ ಭೈರತಿ ರಣಗಲ್‌ ಫ್ಯಾನ್ಸ್‌ ಟೀಮ್‌ನವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಅಲ್ಲಿ ಸೆಲೆಬ್ರೇಶನ್‌ಗೆ ಗನ್‌, ಮಚ್ಚು ಹಿಡ್ಕೊಂಡು ಹುಡುಗರು ಡ್ಯಾನ್ಸ್‌ ಮಾಡುತ್ತಿದ್ದರು. ಒಬ್ಬ ಮಚ್ಚು ತಂದು ನನ್ನ ಕೈಗೆ ಕೊಟ್ಟು ಹಿಡಿಸಿದ. ಇದನ್ನ ಹಿಡ್ಕೊಳ್ಳಣ್ಣ, ಯಾಕೆ ಬಿಟ್ಟಿದ್ದೀಯ, ಹಿಡ್ಕೊ, ಚೆನ್ನಾಗಾಗುತ್ತೆ ಸಿನಿಮಾ ಅಂದ. ಪಾಪ್‌ಕಾರ್ನ್‌ ಮಂಕಿಟೈಗರ್‌, ಟಗರು ಇತ್ಯಾದಿ ಸಿನಿಮಾಗಳಾದ ಮೇಲೆ ಅವರಿಗೆ ನಾನು ಮಾಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ನಿರೀಕ್ಷೆ ಇದೆ. ಆ ನಿರೀಕ್ಷೆ ಈ ಟೀಸರ್‌ನಲ್ಲಿ ಈಡೇರುತ್ತಿದೆ.’

ಇದು ಡಾಲಿ ಧನಂಜಯ ಮಾತು.

ಅವರ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾ ಟೀಸರ್‌ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಶಂಕರ್‌ ಗುರು ನಿರ್ದೇಶನದ ಈ ಚಿತ್ರ

ಶಂಕರ್‌ ಗುರು ನಿರ್ದೇಶನದ ಈ ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿ. ಐರಾ ಫಿಲಂಸ್‌ ಹಾಗೂ ರಾಯಲ ಸ್ಟೂಡಿಯೋಸ್‌ ಈ ಸಿನಿಮಾ ನಿರ್ಮಿಸುತ್ತಿವೆ.