ಮೇಶ್‌ ಅರವಿಂದ್‌ ಹಾಗೂ ಸುಹಾಸಿನಿ ಜೋಡಿಯ ‘ಅಮೃತವರ್ಷಿಣಿ’ ಚಿತ್ರದ ಪಾರ್ಟ್‌ 2 ಬರಲಿದೆ. ಬಿ.ಎಸ್‌. ಸುಧೀಂದ್ರ ಹಾಗೂ ಆರ್‌. ನವೀನ್‌ ನಿರ್ಮಾಣದಲ್ಲಿ ದಿನೇಶ್ ಬಾಬು ಅವರೇ ‘ಅಮೃತವರ್ಷಿಣಿ 2’ ಚಿತ್ರವನ್ನು ನಿರ್ದೇಶಿಸಲಿದ್ದಾರೆ

ಸಿನಿವಾರ್ತೆ

ರಮೇಶ್‌ ಅರವಿಂದ್‌ ಹಾಗೂ ಸುಹಾಸಿನಿ ಜೋಡಿಯ ‘ಅಮೃತವರ್ಷಿಣಿ’ ಚಿತ್ರದ ಪಾರ್ಟ್‌ 2 ಬರಲಿದೆ. ಬಿ.ಎಸ್‌. ಸುಧೀಂದ್ರ ಹಾಗೂ ಆರ್‌. ನವೀನ್‌ ನಿರ್ಮಾಣದಲ್ಲಿ ದಿನೇಶ್ ಬಾಬು ಅವರೇ ‘ಅಮೃತವರ್ಷಿಣಿ 2’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ವಿಶೇಷ ಎಂದರೆ ಪಾರ್ಟ್‌ 2ನಲ್ಲೂ ರಮೇಶ್‌ ಅರವಿಂದ್‌ ಹಾಗೂ ಸುಹಾಸಿನಿ ಅವರೇ ಜೋಡಿಯಾಗಿ ನಟಿಸಲಿದ್ದಾರೆ. ಹಿರಿಯ ನಟ ರಾಮಕೃಷ್ಣ ಹಾಗೂ ತಾರಾ ಚಿತ್ರದ ಪ್ರಮುಖ ಪಾತ್ರಧಾರಿಗಳು.

1997ರಲ್ಲಿ ತೆರೆಗೆ ಬಂದಿದ್ದಅಮೃತವರ್ಷಿಣಿ

1997ರಲ್ಲಿ ತೆರೆಗೆ ಬಂದಿದ್ದ ರಮೇಶ್‌ ಅರವಿಂದ್‌, ಸುಹಾಸಿನಿ ಹಾಗೂ ಶರತ್ ಬಾಬು ಅಭಿನಯದ ಯಶಸ್ಸು ಕಂಡ ಜನಪ್ರಿಯ ಚಿತ್ರವಿದು. ಮೂರು ದಶಕಗಳ ನಂತರ ಅದರ ಮುಂದುವರಿದ ಭಾಗ ಸೆಟ್ಟೇರುತ್ತಿದ್ದು, ಮುಂದಿನ ವರ್ಷ ಜನವರಿ 14ರ ಸಂಕ್ರಾಂತಿ ಹಬ್ಬದಂದು ಚಿತ್ರಕ್ಕೆ ಶೂಟಿಂಗ್‌ ಆರಂಭವಾಗಲಿದೆ.