ರಾಮಾಯಣ ಮಹಾಕಾವ್ಯದ ಮೂಲಕ ಜೀವನದಲ್ಲಿನ ಸಂಬಂಧಗಳ ಮೌಲ್ಯಗಳು ಹಾಗೂ ಬದುಕಿನ ಶ್ರೇಷ್ಠತೆಯನ್ನು ಸಮಾಜಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆಯಾಗಿ ನೀಡಿದ್ದಾರೆ. ನಾವುಗಳು ಧೃಡವಾಗಿ ನಿಂತರೆ ಏನನ್ನಾದರೂ ಸಾಧಿಸಬಹುದು ಗುರಿ ಇದ್ದತೆ ಇಂತಹ ಸಾಧನೆ ಮಾಡಬಹುದು ಎಂದು ಸಮಾಜಕ್ಕೆ ತಿಳಿಸಿರುವುದು ಇವತ್ತಿನ ಪೀಳಿಗೆಗಳಿಗೆ ಬಹು ಮುಖ್ಯಾವಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಮಾಯಣ ಮಹಾ ಕೃತಿಯನ್ನು ಆದಿಕವಿ ವಾಲ್ಮೀಕಿ ಅವರು ರಚಿಸಿ ಜೀವನದ ಶ್ರೇಷ್ಠತೆಯ ಸಂದೇಶವನ್ನು ನೀಡಿ ಸಮಾಜಕ್ಕೆ ಸಂಬಂಧಗಳ ಮೌಲ್ಯವನ್ನು ಸಾರಿದ್ದಾರೆ ಎಂದು ಸೆಸ್ಕ್ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾಚಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ರಾಮಾಯಣ ಮಹಾಕಾವ್ಯದ ಮೂಲಕ ಜೀವನದಲ್ಲಿನ ಸಂಬಂಧಗಳ ಮೌಲ್ಯಗಳು ಹಾಗೂ ಬದುಕಿನ ಶ್ರೇಷ್ಠತೆಯನ್ನು ಸಮಾಜಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆಯಾಗಿ ನೀಡಿದ್ದಾರೆ. ನಾವುಗಳು ಧೃಡವಾಗಿ ನಿಂತರೆ ಏನನ್ನಾದರೂ ಸಾಧಿಸಬಹುದು ಗುರಿ ಇದ್ದತೆ ಇಂತಹ ಸಾಧನೆ ಮಾಡಬಹುದು ಎಂದು ಸಮಾಜಕ್ಕೆ ತಿಳಿಸಿರುವುದು ಇವತ್ತಿನ ಪೀಳಿಗೆಗಳಿಗೆ ಬಹು ಮುಖ್ಯಾವಾಗಿದೆ. ವಾಲ್ಮೀಕಿ ಅವರ ಆದರ್ಶಗಳನ್ನುಬಳಸಿಕೊಳ್ಳಬೇಕು ಎಂದರು.ಇದಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಯಲ್ಲಿ ಬೆಳ್ಳಿ ರಥದ ಮೇಲೆ ವಾಲ್ಮೀಕಿ ಭಾವಚಿತ್ರವಿಟ್ಟು ರಥವನ್ನು ಮಂಗಳವಾದ್ಯದೊಂದಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ಟಿಎಪಿಸಿಎಂಎಸ್ ವರೆಗೆ ಸಾಗಿತು. ನಂತರ ಟಿಎಪಿಸಿಎಂಎಸ್ನ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆದು ಮೈಸೂರಿನ ಸಾಹಿತಿ ಡಾ.ಅನುಸೂಯ ಎಸ್.ಕೆಂಪನಹಳ್ಳಿ ಅವರು ವಾಲ್ಮೀಕಿ ಚರಿತ್ರೆ ಕುರಿತು ಮುಖ್ಯಭಾಷಣ ಮಾಡಿದರು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದವರನ್ನು ಅಭಿನಂಧಿಸಲಾಯಿತು.
ಸಮಾರಂಭದಲ್ಲಿ ತಹಸೀಲ್ದಾರ್ ಚೇತನ ಯಾದವ್, ತಾಪಂ ಇಒ ಚಂದ್ರು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್.ದಿನೇಶ್, ಕೃಷಿ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ಬಿಇಒ ಚಂದ್ರಶೇಖರ್, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಚಂದ್ರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.