ಸಾರಾಂಶ
ಕರಾವಳಿಯ ದೈವ ರಕ್ತಾಶ್ವರಿಯ ಉಗ್ರರೂಪ ಇರುವ ದಿಂಸೋಲ್
ಕನ್ನಡಪ್ರಭ ಸಿನಿವಾರ್ತೆ ‘ದಿಂಸೋಲ್’ ಎಂಬ ಕರಾವಳಿ ಭಾಗದ ಕಥೆಯೊಂದಕ್ಕೆ ನಾಗೇಂದ್ರ ಗಾಣಿಗ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಕರಾವಳಿಯ ಬಹುಮಂದಿ ಆರಾಧಿಸುವ ರಕ್ತೇಶ್ವರಿ ದೈವದ ಉಗ್ರರೂಪ ಪೋಸ್ಟರ್‌ನಲ್ಲಿದೆ.
ಉಡುಪಿ ಕುಂದಾಪುರ ಭಾಗದಲ್ಲಿ ಶಿವರಾತ್ರಿ ಸಂದರ್ಭ ಮಾಡುವ ದಿಂಸೋಲ್ ಆಚರಣೆಯೇ ಈ ಸಿನಿಮಾದ ಶೀರ್ಷಿಕೆಯಾಗಿದೆ. ರಥಕಿರಣ್ ಹಾಗೂ ಶಿವಾನಿ ರೈ ಈ ಸಿನಿಮಾದ ನಾಯಕ ನಾಯಕಿ. ಮಾನಸಿ ಸುಧೀರ್, ದೇವದಾಸ್ ಕಾಪಿಕಾಡ್, ರಘು ಪಾಂಡೇಶ್ವರ್, ದೀಪಕ್ ರೈ ಪಾಣಾಜೆ, ಮೈಮ್ ರಾಮ್‌ದಾಸ್, ಗಣೇಶ್ ಕಾರಂತ್, ಸೂರಜ್ ಹಾಗೂ ಸುರಭಿ ಹಾಗೂ ಕರಾವಳಿಯ ರಂಗಭೂಮಿ ಕಲಾವಿದರು ನಟಿಸಲಿದ್ದಾರೆ.