ಪ್ರಜ್ವಲ್ ದೇವರಾಜ್ ಅವರ 'ರಾಕ್ಷಸ' ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆ : ನಿರ್ದೇಶಕ ಲೋಹಿತ್

| Published : Sep 26 2024, 09:49 AM IST / Updated: Sep 26 2024, 11:32 AM IST

ಪ್ರಜ್ವಲ್ ದೇವರಾಜ್ ಅವರ 'ರಾಕ್ಷಸ' ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆ : ನಿರ್ದೇಶಕ ಲೋಹಿತ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್ ದೇವರಾಜ್ ಅವರ 'ರಾಕ್ಷಸ' ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಟೈಮ್ ಲೂಪ್ ಹಾರರ್ ಸಬ್ಜೆಕ್ಟ್ ಹೊಂದಿರುವ ಈ ಸಿನಿಮಾವನ್ನು ಲೋಹಿತ್ ನಿರ್ದೇಶಿಸಿದ್ದಾರೆ ಮತ್ತು ದೀಪು ಬಿಎಸ್ ನಿರ್ಮಿಸಿದ್ದಾರೆ.

 ಸಿನಿವಾರ್ತೆ

ಪ್ರಜ್ವಲ್ ದೇವರಾಜ್ ಅಭಿನಯದ ಹಾರರ್ ಲೂಪ್ ಸಿನಿಮಾ ‘ರಾಕ್ಷಸ’ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ದೀಪು ಬಿಎಸ್ ನಿರ್ಮಾಣದ ಈ ಸಿನಿಮಾ ಕುರಿತು ನಿರ್ದೇಶಕ ಲೋಹಿತ್ ಮಾಹಿತಿ ನೀಡಿದ್ದಾರೆ.

‘ಇದು ಪ್ರಯೋಗಾತ್ಮಕ ಕಥೆ. ಇದರಲ್ಲಿ ಹೀರೋಯಿಸಂ, ಫೈಟ್‌, ಹಾಡುಗಳಂಥಾ ಮಾಮೂಲಿ ಅಂಶಗಳಿರಲ್ಲ. ಆದರೆ ಸದಾ ಹೊಸತನದ ಹುಡುಕಾಟದಲ್ಲಿರುವ ಪ್ರಜ್ವಲ್‌ ಖುಷಿಯಿಂದ ಒಪ್ಪಿಕೊಂಡು ನಟಿಸಿದ್ದಾರೆ. ವರ್ಲ್ಡ್‌ ಸಿನಿಮಾದಲ್ಲೇ ಟೈಮ್‌ ಲೂಪ್‌ನಲ್ಲಿ ಹಾರರ್‌ ಸಬ್ಜೆಕ್ಟ್‌ ಬಂದಿಲ್ಲ. ನಂಗೆ ಈ ಪ್ರಯೋಗ ಮಾಡಬೇಕು ಅನಿಸಿತು’ ಎಂದು ಲೋಹಿತ್ ಹೇಳಿದ್ದಾರೆ.

‘ಗ್ಯಾಂಗ್‌ಸ್ಟರ್‌ ಸಿನಿಮಾ ಮಾಡುವ ಆಸೆಯಿಂದ ಬಂದಿದ್ದೆ. ಆದರೆ ಯಾವ ಹೀರೋಗಳೂ ಕಥೆ ಕೇಳಲೇ ಒಪ್ಪಲಿಲ್ಲ. ಆ ಫ್ರರ್ಸ್ಟೇಶನ್‌ನಲ್ಲೇ ಮಹಿಳಾ ಪ್ರಧಾನ ಹಾರರ್‌ ಸಿನಿಮಾ ಮಾಡಿದೆ. ಈಗ ಮತ್ತೊಂದು ವಿಶಿಷ್ಟ ಸಿನಿಮಾ ಮಾಡಿದ್ದೇನೆ. ನಾನು ಹೊಸ ಬಗೆಯಲ್ಲಿ ಸ್ಟೀರಿಯೋಟೈಪ್‌ಗಳನ್ನು ಮೀರಿ ಸಿನಿಮಾ ಮಾಡಲು ಪ್ರಯತ್ನಿಸುತ್ತೀನಿ. ಈ ಸಿನಿಮಾ ಕೂಡ ಹೊಸ ಬಗೆಯ ಸಿನಿಮಾ’ ಎನ್ನುತ್ತಾರೆ ರೋಹಿತ್.