ಸಾರಾಂಶ
ಎವಿಡೆನ್ಸ್ ಸಿನಿಮಾದ ಲಿರಿಕಲ್ ಹಾಡು ಅನಾವರಣ.
ರೋಬೋ ಗಣೇಶನ್ ನಟನೆಯ ‘ಎವಿಡೆನ್ಸ್’ ಸಿನಿಮಾದ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ‘ಅಯ್ಯಯ್ಯೋ ಅರೆ ಮನಕೆ’ ಎಂಬ ಹಾಡನ್ನು ಸ್ಪೈಡರ್ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಕೇಳಬಹುದು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರವೀಣ್, ‘ವಿಲನ್ನೇ ನಮ್ಮ ಸಿನಿಮಾದ ಹೀರೋ. ವಿಚಾರಣಾ ಕೊಠಡಿಯಲ್ಲಿ ಹೊರಬೀಳುವ ರೋಚಕ ಸಂಗತಿಗಳ ಸುತ್ತ ಸಿನಿಮಾವಿದೆ. ಆರಂಭದಲ್ಲಿ ಎರಡೇ ಪಾತ್ರಗಳ ಮೂಲಕ ಸಿನಿಮಾ ಕಟ್ಟಿಕೊಡುವ ಕನಸಿತ್ತು. ಈಗ ಸಿನಿಮಾಕ್ಕೆ ಕಮರ್ಷಿಯಲ್ ಟಚ್ ಕೊಟ್ಟು ಒಂದಿಷ್ಟು ಪಾತ್ರಗಳನ್ನು ಸೇರಿಸಿದ್ದೇವೆ. ಆತ್ಮಹತ್ಯೆ ಹಾಗೂ ಪ್ರೇಮಕಥೆ ಹಿನ್ನೆಲೆಯೂ ಚಿತ್ರಕ್ಕಿದೆ’ ಎಂದರು.ಮುಖ್ಯಪಾತ್ರದಲ್ಲಿ ನಟಿಸಿರುವ ಮಾನಸಾ ಜೋಷಿ, ‘ಸಸ್ಪೆಂಡ್ ಆಗಿದ್ದು ಈ ಕೇಸ್ ವಿಚಾರಣೆಗೆ ಬರುವ ವಿಶೇಷ ತನಿಖಾಧಿಕಾರಿ ಪಾತ್ರ ನನ್ನದು. ಇಂಥಾ ಎಕ್ಸ್‌ಪರಿಮೆಂಟ್ ಸಿನಿಮಾಗಳಿಗೇ ಆದ್ಯತೆ ನೀಡುತ್ತೇನೆ’ ಎಂದರು.
ನಟ ಆಕರ್ಷ್ ಆದಿತ್ಯ, ಕಾರ್ತಿಕ್ ವರ್ಣೇಕರ್, ರೇಣು ಶಿಕಾರಿ, ಪವನ್ ಸುರೇಶ್, ಶಿವಕುಮಾರ್ ಆರಾಧ್ಯ, ನಿರ್ಮಾಪಕರಾದ ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಶ್ರೀನಿವಾಸ್ ಪ್ರಭು ಕೆ, ಕೆ.ಮಾದೇಶ್, ನಟರಾಜ್ ಸಿ.ಎಸ್, ಸಹ ನಿರ್ಮಾಪಕ ಎಂ ಎನ್ ರವೀಂದ್ರ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ, ರವಿ ಸುವರ್ಣ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಸಂಕಲನ ಚಿತ್ರಕ್ಕಿದೆ.