ಸಾರಾಂಶ
ನಟ ತೇಜಾ ಸಜ್ಜಾ ಅಭಿನಯದ ‘ಹನುಮಾನ್’ ಚಿತ್ರದ ಎರಡನೇ ಭಾಗವಾದ ‘ಜೈ ಹನುಮಾನ್’ ಚಿತ್ರದಲ್ಲಿ ಜನಪ್ರಿಯ ನಟ ರಾಕಿಂಗ್ ಸ್ಟಾರ್ ಯಶ್ ಹನುಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಸುಳ್ಳುಸುದ್ದಿ ಎಂದು ನಟ ಯಶ್ ಅವರ ಹತ್ತಿರದ ಮೂಲಗಳು ತಿಳಿಸಿವೆ.
ಮುಂಬೈ: ನಟ ತೇಜಾ ಸಜ್ಜಾ ಅಭಿನಯದ ‘ಹನುಮಾನ್’ ಚಿತ್ರದ ಎರಡನೇ ಭಾಗವಾದ ‘ಜೈ ಹನುಮಾನ್’ ಚಿತ್ರದಲ್ಲಿ ಜನಪ್ರಿಯ ನಟ ರಾಕಿಂಗ್ ಸ್ಟಾರ್ ಯಶ್ ಹನುಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಸುಳ್ಳುಸುದ್ದಿ ಎಂದು ನಟ ಯಶ್ ಅವರ ಹತ್ತಿರದ ಮೂಲಗಳು ತಿಳಿಸಿವೆ. ಜೈ ಹನುಮಾನ್ ಚಿತ್ರದಲ್ಲಿ ಯಶ್ ಹನುಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಭಾರೀ ವೈರಲ್ ಆಗಿದೆ. ಆದರೆ ಈ ಬಗ್ಗೆ ಚಿತ್ರತಂಡವಾಗಲೀ, ಯಶ್ ಆಗಲೀ ಅಧಿಕೃತ ಸ್ಪಷ್ಟನೆ ನೀಡದ ಕಾರಣ ಈ ಸುದ್ದಿ ಬಹುತೇಕ ಸತ್ಯ ಎಂದು ವದಂತಿಗಳಾಗಿದ್ದವು. ‘ಆದರೆ ಸದ್ಯ ಯಶ್ ‘ಟಾಕ್ಸಿಕ್’ ಚಿತ್ರದಲ್ಲಿ ಬಿಸಿಯಾಗಿದ್ದಾರೆ. ಜೈ ಹನುಮಾನ್‌ನಲ್ಲಿ ಅವರು ನಟಿಸುತ್ತಾರೆ ಎಂಬುದು ಆಧಾರ ರಹಿತ’ ಎಂದು ಯಶ್ ಟೀಂ ಹೇಳಿದೆ.