ಫೆ.9ರಂದು ರಾಗಿಣಿ ನಟನೆಯ ಇ-ಮೇಲ್‌ ಬಿಡುಗಡೆ

| Published : Feb 09 2024, 01:47 AM IST

ಫೆ.9ರಂದು ರಾಗಿಣಿ ನಟನೆಯ ಇ-ಮೇಲ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಗಿಣಿ ನಟನೆಯ ಇ ಮೇಲ್ ಚಿತ್ರ ಇದೇ ಫೆ.9ಕ್ಕೆ ತೆರೆಗೆ ಬರುತ್ತಿದೆ.

ಕನ್ನಡಪ್ರಭ ಸಿನಿವಾರ್ತೆರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿರುವ ‘ಇ-ಮೇಲ್‌’ ಚಿತ್ರದ ಟ್ರೇಲರ್ ಬಂದಿದೆ. ಎಸ್‌ ಆರ್‌ ರಾಜನ್‌ ನಿರ್ದೇಶಿಸಿ, ನಿರ್ಮಿಸಿರುವ ಚಿತ್ರವಿದು. ಸಿರಿ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಚಿತ್ರದ ಟ್ರೇಲರ್‌ ನೋಡಬಹುದು. ಫೆ.9ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ

ಈ ಕುರಿತು ರಾಗಿಣಿ, ‘ಇದು ಮಹಿಳಾ ಪ್ರಧಾನ ಸಿನಿಮಾ. ‘ಇ-ಮೇಲ್‌’ ಮೂಲಕ ನಡೆಯುವ ಸ್ಕ್ಯಾಮ್‌ ಕತೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ತಾಂತ್ರಿಕವಾಗಿ ತುಂಬಾ ಚೆನ್ನಾಗಿದೆ’ ಎಂದರು.ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮುರುಗ ಅಶೋಕ್‌ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ‘ನನಗೆ ಇದು ಮೊದಲ ಕನ್ನಡ ಸಿನಿಮಾ. ನಾನು ಯಾವ ಭಾಷೆಯಲ್ಲಿ ಸಿನಿಮಾ ಮಾಡಿದರೂ ಆ ಭಾಷೆಯನ್ನು ಕಲಿಯುತ್ತೇನೆ. ಕನ್ನಡ ಕಲಿಯುತ್ತಿದ್ದೇನೆ’ ಎಂದರು ಮುರುಗ ಅಶೋಕ್‌. ನಿರ್ದೇಶಕ ಎಸ್‌ ಆರ್‌ ರಾಜನ್‌, ‘ಸಿನಿಮಾ ಕನ್ನಡ ಹಾಗೂ ಮಲಯಾಳಂನಲ್ಲಿ ತೆರೆಗೆ ಬರಲಿದ್ದು, ಸಕತ್‌ ಥ್ರಿಲ್ಲಿಂಗ್‌ ಅನುಭವ ನೀಡುತ್ತದೆ’ ಎಂದರು. ಸಿರಿ ಮ್ಯೂಸಿಕ್‌ನ ಸುರೇಶ್‌ ಚಿಕ್ಕಣ್ಣ ಹಾಜರಿದ್ದರು.