ಸಾರಾಂಶ
ಭ್ರೂಣ ಹತ್ಯೆ, ಅದರ ಹಿಂದಿನ ಕರಾಳತೆಗಳ ವಿರುದ್ಧ ಧ್ವನಿ ಎತ್ತುವ ಪ್ರಶಸ್ತಿ ವಿಜೇತ ಚಿತ್ರ ತಾರಿಣಿ. ಇದು ಮುಂದಿನ ವಾರ ತೆರೆಗೆ ಬರುತ್ತಿದೆ.
ಭ್ರೂಣಹತ್ಯೆಯ ಕಥಾಹಂದರವುಳ್ಳ ಸಿನಿಮಾ ‘ತಾರಿಣಿ’ ಮಾ. 29ಕ್ಕೆ ತೆರೆ ಕಾಣುತ್ತಿದೆ. ಈಗಾಗಲೇ ಹಲವು ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿರುವ ಈ ಚಿತ್ರದಲ್ಲಿ ನಟಿ ಮಮತಾ ರಾಹುತ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ನಿಜ ಜೀವನದಲ್ಲಿ ಗರ್ಭಿಣಿಯಾಗಿದ್ದಾಗಲೇ ಈ ಸಿನಿಮಾದಲ್ಲೂ ಅವರು ಗರ್ಭಿಣಿ ಪಾತ್ರ ಮಾಡಿರುವುದು ವಿಶೇಷ. ಇದೊಂದು ನೈಜ ಘಟನೆ ಆಧರಿತ ಚಿತ್ರವಾಗಿದ್ದು, ಸಿದ್ದು ಪೂರ್ಣಚಂದ್ರ ನಿರ್ದೇಶಕರು. ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಈ ಸಿನಿಮಾ ನಿರ್ಮಿಸಿದ್ದಾರೆ. ರೋಹಿತ್, ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ. ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮೀ, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್ ಕೋಟ್ಯಾನ್ ನಟಿಸಿದ್ದಾರೆ.