ಸಂಗೀತಮಯ ಪ್ರೇಮಕತೆ, ಕೌಟುಂಬಿಕ ಚಿತ್ರ ಫಾರ್‌ ರಿಜಿಸ್ಟ್ರೇಶನ್‌: ಮಿಲನಾ ನಾಗರಾಜ್‌

| Published : Feb 23 2024, 01:46 AM IST

ಸಂಗೀತಮಯ ಪ್ರೇಮಕತೆ, ಕೌಟುಂಬಿಕ ಚಿತ್ರ ಫಾರ್‌ ರಿಜಿಸ್ಟ್ರೇಶನ್‌: ಮಿಲನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಫಾರ್‌ ರಿಜಿಸ್ಟ್ರೇಶನ್‌ ಸಿನಿಮಾ ಸಂಗೀತಮಯ, ಪ್ರೇಮ, ಸಾಂಸಾರಿಕ ಕಥೆ ಎನ್ನುತ್ತಾರೆ ನಾಯಕಿ ಮಿಲನಾ ನಾಗರಾಜ್‌. ಇಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ಮಿಲನಾ ನಾಗರಾಜ್ ಮತ್ತು ಪೃಥ್ವಿ ಅಂಬಾರ್ ನಟಿಸಿರುವ, ನವೀನ್ ದ್ವಾರಕನಾಥ್ ನಿರ್ದೇಶನದ, ನವೀನ್ ನಿರ್ಮಾಣದ ‘ಫಾರ್ ರಿಜಿಸ್ಟ್ರೇಷನ್’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಿಲನಾ ನಾಗರಾಜ್ ಸಂದರ್ಶನ.- ಪ್ರಿಯಾ ಕೆರ್ವಾಶೆ

- ಈ ಸಿನಿಮಾ ಒಪ್ಪಿಕೊಳ್ಳಲು ಕಾರಣವಾದ ಅಂಶಗಳೇನು?

ಎಲ್ಲರಿಗೂ ರಿಲೇಟ್‌ ಆಗುವಂಥಾ ಸಬ್ಜೆಕ್ಟ್‌. ಹೆಚ್ಚಿನವರ ಬದುಕಲ್ಲಿ ಈ ರೀತಿಯ ಒಂದು ಡ್ರಾಮಾ ನಡೆದಿರುತ್ತೆ. ಇದು ಫ್ಯಾಮಿಲಿ ಡ್ರಾಮಾ. ಯೂತ್‌, ಫ್ಯಾಮಿಲಿ ಎಲ್ಲಾ ಕೂತ್ಕೊಂಡು ನೋಡೋ ಸಿನಿಮಾ. ನಾವು ಹೇಳಲು ಹೊರಟಿರುವ ಸಂದೇಶವೂ ಹಲವರಿಗೆ ಹತ್ತಿರವಾಗುತ್ತದೆ. - ಪಾತ್ರ ಒಪ್ಕೊಂಡ ಮೇಲೆ ಮಾಡ್ಕೊಳ್ಳೋ ಹೋಂವರ್ಕ್?ಸಿಂಪಲ್‌ ಫ್ಯಾಮಿಲಿ ಡ್ರಾಮಾ, ಲವ್‌ ಸ್ಟೋರಿಗಳಿಗೆಲ್ಲ ಹೆಚ್ಚಿನ ಹೋಂವರ್ಕ್‌ನ ಅಗತ್ಯ ಬರಲ್ಲ. ಆನ್‌ಸ್ಪಾಟ್‌ ನೀವು ರೆಡಿ ಆಗೋದಷ್ಟೇ ಮುಖ್ಯ ಆಗಿರುತ್ತೆ. ಈ ಸಿನಿಮಾಕ್ಕೂ ಹೆಚ್ಚಿನ ಹೋಂವರ್ಕ್‌ನ ಅವಶ್ಯಕತೆ ಬರಲಿಲ್ಲ. - ಅನ್ವಿ ಪಾತ್ರ ಅರ್ಥ ಆಗೋದಕ್ಕೆ ಎಷ್ಟು ಸಮಯ ಹಿಡಿಯಿತು?ಇದು ಸಿಂಪಲ್‌, ಇಂಡಿಪೆಂಡೆಂಟ್‌ ಪಾತ್ರ. ಹಾಗಾಗಿ ಪಾತ್ರ ನಿರ್ವಹಣೆ ಕಷ್ಟ ಆಗಲಿಲ್ಲ. ಈಗಿನ ಯುವಕರು ಹಾಗೂ ಇವರ ತಂದೆ ತಾಯಿ ಮದುವೆಯನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋ ಅಂಶ ಮುಖ್ಯವಾಗಿ ಬಂದಿದೆ. ಸೆಪರೇಶನ್‌, ಡಿವೋರ್ಸ್‌ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಪ್ರಯತ್ನ ಈ ಚಿತ್ರದ್ದು. - ಇಂಥಾ ಸಬ್ಜೆಕ್ಟ್‌ ಬಂದಾಗ ಬೇರೆ ಬೇರೆ ಶೇಡ್‌ಗಳತ್ತ ಗಮನಕೊಡದೇ ಪೂರ್ವ ನಿರ್ಧರಿತ ಅಂಶಕ್ಕೆ ಜೋತು ಬೀಳುವ ಅಪಾಯವೂ ಇದೆಯಲ್ಲಾ? ಕಳೆದ ಎರಡು ಮೂರು ದಶಕಗಳಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯನ್ನು ನೋಡಿದ್ದೇವೆ. ಸಂಪ್ರದಾಯ, ಮಕ್ಕಳ ನಿರ್ಧಾರ, ಮದುವೆ ಇಂಥಾ ವಿಚಾರದಲ್ಲಿ ಆಗಿರುವ ಒಂದು ಶಿಫ್ಟ್‌ ಬಗ್ಗೆ ಸಿನಿಮಾ ಮಾತನಾಡುತ್ತದೆ. ಆದರೂ ಆ ಬದಲಾವಣೆಯನ್ನು ಸಮಾಜ ಇನ್ನೂ ಮುಕ್ತವಾಗಿ ಒಪ್ಪಿಕೊಂಡಿಲ್ಲ. ಪ್ರೇಮ ವಿವಾಹದ ಬಗ್ಗೆ ನಮ್ಮಲ್ಲಿ ಇನ್ನೂ ಮುಜುಗರ ಉಳಿದುಕೊಂಡಿದೆ. ಈ ಸೂಕ್ಷ್ಮಗಳ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲುತ್ತದೆ. - ನೀವು ನ್ಯಾಶನಲ್‌ ಲೆವೆಲ್‌ ಸ್ವಿಮ್ಮರ್‌ ಅಂತೆ?ಹೌದು. ನಾಲ್ಕೈದು ವರ್ಷದವಳಿದ್ದಾಗಿಂದಲೇ ಸ್ವಿಮ್ಮಿಂಗ್ ಮಾಡುತ್ತಿದ್ದೆ. ನನ್ನ ಸ್ವಿಮ್ಮಿಂಗ್‌ ಸ್ಕಿಲ್‌ನಿಂದಾಗಿ ಈ ಸಿನಿಮಾದ ಅಂಡರ್‌ ವಾಟರ್‌ ಸೀನ್‌ ಶೂಟ್‌ ಕಷ್ಟ ಅನಿಸಲಿಲ್ಲ.- ಸಿನಿಮಾದ ವಿಶೇಷತೆಗಳು?ನಾನು ಸಿನಿಮಾ ನೋಡಿಲ್ಲ. ಸಿನಿಮಾ ನೋಡಿರುವವರು ನನ್ನ, ಪೃಥ್ವಿ ಕಾಂಬಿನೇಶನ್‌ ಅನ್ನು ಇಷ್ಟ ಪಟ್ಟಿದ್ದಾರೆ. 4 ವರ್ಷದ ಹಿಂದೆ ಏಕಕಾಲದಲ್ಲಿ ಅವರ ‘ದಿಯಾ’ ಸಿನಿಮಾ, ನನ್ನ ‘ಲವ್‌ ಮಾಕ್ಟೇಲ್‌’ ಸಿನಿಮಾ ತೆರೆಕಂಡು ಯಶಸ್ವಿ ಆಗಿತ್ತು. ನಮ್ಮ ನಟನೆಗೂ ಪ್ರಶಂಸೆ ವ್ಯಕ್ತವಾಗಿತ್ತು. ಹಾಗೇ ಆ ಟೈಮಲ್ಲಿ ನನ್ನ ಹಾಗೂ ಪೃಥ್ವಿ ಕಾಂಬಿನೇಶನ್‌ ನೋಡ್ಬೇಕು ಅಂತ ಹೇಳಿದ್ದವರು ಈ ಸಿನಿಮಾದಲ್ಲಿ ಅದನ್ನು ನೋಡಬಹುದು. ಮ್ಯೂಸಿಕಲ್‌ ಲವ್‌ಸ್ಟೋರಿ ಮತ್ತು ಫ್ಯಾಮಿಲಿ ಡ್ರಾಮಾ ಕಥೆಯೂ ಸೊಗಸಾಗಿದೆ.