ಸಾರಾಂಶ
ರೆಟ್ರೋ ಅನ್ನೋ ಟ್ಯಾಗ್‌ಲೈನ್‌ನಲ್ಲಿ ಹಳೆಯ ಸ್ಟೈಲ್ ಮತ್ತೆ ಮತ್ತೆ ಬರುತ್ತಿರುತ್ತದೆ. ನಾವು ಚಿಕ್ಕೋರಿದ್ದಾಗಲೋ, ಹುಟ್ಟೋ ಮುಂಚೆನೋ ಇದ್ದ ಫ್ಯಾಶನ್‌ಗಳೆಲ್ಲ ಈಗ ರಾಜ ಗಾಂಭೀರ್ಯದಿಂದ ಫ್ರಂಟ್ ಸೀಟನ್ನು ಅಲಂಕರಿಸಿವೆ. ಅದರಲ್ಲೊಂದು ಈ ಹೈ ಬೂಟ್.
ರೆಟ್ರೋ ಅನ್ನೋ ಟ್ಯಾಗ್‌ಲೈನ್‌ನಲ್ಲಿ ಹಳೆಯ ಸ್ಟೈಲ್ ಮತ್ತೆ ಮತ್ತೆ ಬರುತ್ತಿರುತ್ತದೆ. ನಾವು ಚಿಕ್ಕೋರಿದ್ದಾಗಲೋ, ಹುಟ್ಟೋ ಮುಂಚೆನೋ ಇದ್ದ ಫ್ಯಾಶನ್‌ಗಳೆಲ್ಲ ಈಗ ರಾಜ ಗಾಂಭೀರ್ಯದಿಂದ ಫ್ರಂಟ್ ಸೀಟನ್ನು ಅಲಂಕರಿಸಿವೆ. ಅದರಲ್ಲೊಂದು ಈ ಹೈ ಬೂಟ್. ಇದನ್ನು ಪ್ಯಾಶನ್ ತಜ್ಞರು ‘ಟೈಮ್‌ಲೈಸ್’ ಅಂತಾರೆ. ಸ್ಕರ್ಟ್, ಕಾಲು ಕಾಣುವಂಥಾ ಔಟ್‌ಫಿಟ್, ಉದ್ದದ ಗೌನ್, ಕೆಲವೊಮ್ಮೆ ಸೀರೆಗೂ ಈ ಹೈ ಬೂಟ್ ತೊಟ್ಟು ಮೆರೆಯುವ ಸುಂದರಿಯರಿದ್ದಾರೆ.
ಗಮ್‌ಬೂಟ್ ಹಾಕಿ ಫಾರಿನ್‌ನಲ್ಲೆಲ್ಲ ಸವಾರಿ
ಮೊನ್ನೆ ಮೊನ್ನೆ ಮೌನಿ ರಾಯ್ ತುಂಡು ಲಂಗದ ಮೇಲೊಂದು ಹೊಸ ಸ್ಟೈಲಿನ ಟಾಪ್ ಸಿಕ್ಕಿಸಿಕೊಂಡು ಗಮ್‌ಬೂಟ್ ಹಾಕಿ ಫಾರಿನ್‌ನಲ್ಲೆಲ್ಲ ಸವಾರಿ ಮಾಡಿ ಬಂದರು. ‘ಕೆಲವೊಮ್ಮೆ ನಮ್ಮ ಡ್ರೆಸ್ ಅಂಥಾ ಚೆನ್ನಾಗಿಲ್ಲ ಅಂದ್ರೆ ಹೈ ಬೂಟ್ ಹಾಕ್ತೀನಿ. ಎಂಥಾ ಕಾನ್ಫಿಡೆನ್ಸ್ ಕೊಡುತ್ತೆ ಗೊತ್ತಾ..’ ಅಂತೊಂದು ಸ್ಟೇಟ್‌ಮೆಂಟನ್ನೂ ಕೊಟ್ಟು ತನ್ನ ಡ್ರೆಸ್‌ನ ಚಂದವನ್ನೂ ಮೀಡಿ ಹೈ ಬೂಟ್ಸ್ ಕೊಟ್ಟ ಗತ್ತಿನ ಬಗ್ಗೆ ಲೆಕ್ಚರ್ ಕೊಟ್ಟರು.
ರಶ್ಮಿಕಾ ಮಂದಣ್ಣ ಈ ಹೈಟ್ ಬೂಟ್‌ನಲ್ಲಿ ಸಿನಿಮಾ ಪ್ರಮೋಶನ್
‘ತಮಾ’ ಅನ್ನೋ ದೆವ್ವದ ಪಿಕ್ಚರ್‌ನಲ್ಲಿ ಭಯ ಹುಟ್ಟಿಸುವಂತೆ ಕಾಣಿಸಿಕೊಂಡ ಮುದ್ದು ರಾಕ್ಷಸಿ ರಶ್ಮಿಕಾ ಮಂದಣ್ಣ ಈ ಹೈಟ್ ಬೂಟ್‌ನಲ್ಲಿ ಸಿನಿಮಾ ಪ್ರಮೋಶನ್‌ಗಳಲ್ಲಿ ಪಾಲ್ಗೊಂಡರು. ಸೊಕ್ಕಿನ ಹುಡುಗಿ ಲುಕ್ ಇದು ಅಂತ ಪಡ್ಡೆ ಹುಡುಗರು ಹೇಳಿದ್ದನ್ನ ಕಿವಿಗೇ ಹಾಕ್ಕೊಳ್ಳಲಿಲ್ಲ.
ಪ್ರಿಯಾಂಕಾ ಚೋಪ್ರಾ ಅಂತ ಅಮೆರಿಕಾದಲ್ಲಿ ಓಡಾಡುವಾಗ ಎಲ್ಲ ಬಗೆಯ ಡ್ರೆಸ್‌ಗೂ ಈ ಹೈ ಬೂಟ್ ಧರಿಸಿ ಸ್ಟೈಲ್ ಮಾಡುತ್ತದೆ.
ಬೆಂಗಳೂರಿನ ಕೆಲವು ಕಾಲೇಜುಗಳ ಸಮೀಪ ಸಂಜೆ ಹೊತ್ತು ಸುಳಿದಾಡಿದರೆ ಕಾಲೇಜು ಮುಗಿಸಿ ಆಚೆ ಬರೋ ಹುಡುಗೀರೂ ಈ ಸ್ಟೈಲ್‌ನಲ್ಲಿ ಮುಗುಳ್ನಗೋದು ಕಾಣಿಸುತ್ತೆ. ಅಲ್ಲಿಗೆ ಬಾಂಬೆಯಿಂದ ಬೆಂಗ್ಳೂರು ತನಕ ಈ ಹೈ ಬೂಟ್ ಹವಾ ಮೆಂಟೇನ್ ಮಾಡಿದೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))