ಟಾಕ್ಸಿಕ್‌ ಸಿನಿಮಾದಲ್ಲಿ ಕಿಯಾರಾ ಅದ್ವಾನಿ ನಟನೆ ಸಾಧ್ಯತೆ

| Published : Mar 25 2024, 11:45 PM IST

ಟಾಕ್ಸಿಕ್‌ ಸಿನಿಮಾದಲ್ಲಿ ಕಿಯಾರಾ ಅದ್ವಾನಿ ನಟನೆ ಸಾಧ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಟಾಕ್ಸಿಕ್ ಸಿನಿಮಾದ ಕಲಾವಿದರ ಆಯ್ಕೆ ಅಂತಿಮ ಹಂತದಲ್ಲಿದ್ದು, ಕಿಯಾರ ಅದ್ವಾನಿ ಯಶ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಕನ್ನಡಪ್ರಭ ಸಿನಿವಾರ್ತೆ

ಯಶ್‌ ನಟನೆಯ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್‌’ನಲ್ಲಿ ಬಾಲಿವುಡ್‌ ನಟಿ ಕಿಯಾರಾ ಅದ್ವಾನಿ ಯಶ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈಗಾಗಲೇ ಈ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಜೊತೆಗೆ ಸಾಯಿ ಪಲ್ಲವಿ, ಶ್ರುತಿ ಹಾಸನ್‌ ಹೆಸರೂ ಕೇಳಿ ಬಂದಿತ್ತು. ಇದೀಗ ಇದಕ್ಕೆ ಕಿಯಾರಾ ಹೆಸರು ಸೇರ್ಪಡೆಯಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ‘ಟಾಕ್ಸಿಕ್‌ ಸಿನಿಮಾದಲ್ಲಿನ ಮುಖ್ಯ ನಟ, ನಟಿಯರ ಆಯ್ಕೆ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲಿ ನಾವು ಮುಖ್ಯ ಕಲಾವಿದರ ವಿವರ ನೀಡುತ್ತೇವೆ’ ಎಂದಿದ್ದಾರೆ. ‘ಟಾಕ್ಸಿಕ್‌’ ಚಿತ್ರತಂಡ ಇದೀಗ ಹೊಸ ನಟ ನಟಿಯರಿಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ‘ಕಾಸ್ಟಿಂಗ್‌ ಕಾಲ್‌’ ಮೂಲಕ ಹೊಸ ಕಲಾವಿದರಿಗೆ ಮುಕ್ತ ಆಹ್ವಾನ ನೀಡಿದೆ. ಮಕ್ಕಳ ಪಾತ್ರಕ್ಕೆ 12 ರಿಂದ 14 ವಯಸ್ಸಿನ ಹುಡುಗ ಹುಡುಗಿಯರು, 23 ರಿಂದ 65 ವಯಸ್ಸಿನವರೆಗಿನ ಮಹಿಳೆಯರು, 25 ರಿಂದ 75 ವಯಸ್ಸಿನವರೆಗಿನ ಪುರುಷರು ವೀಡಿಯೋ ಕಳುಹಿಸಬಹುದು. ಯಾವುದೇ ಭಾಷೆಯಲ್ಲಿ ಒಂದು ನಿಮಿಷದ ಪರಿಚಯದ ವೀಡಿಯೋ ಹಾಗೂ ಒಂದು ನಿಮಿಷದ ಪ್ರತಿಭೆ ತೋರಿಸುವಂಥಾ ವೀಡಿಯೋ ಮಾಡಿ 8618706590 ನಂಬರ್‌ಗೆ ವಾಟ್ಸಾಪ್‌ ಮಾಡಬಹುದು. ಈ ವೀಡಿಯೋ ಕಳುಹಿಸಲು ಇಂದು (ಮಾ.25) ಕೊನೆಯ ದಿನವಾಗಿದೆ. ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಮೂಲಕ ವೆಂಕಟ್‌ ಕೆ ನಾರಾಯಣ ನಿರ್ಮಿಸುತ್ತಿದ್ದಾರೆ. ಗೋವಾದ ಡ್ರಗ್ಸ್‌ ಮಾಫಿಯಾ ಕಥೆಯ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿಬರಲಿದ್ದು 2025ರ ಏ.10ಕ್ಕೆ ಬಿಡುಗಡೆಯಾಗಲಿದೆ.