ಸಾರಾಂಶ
ಇಂದ್ರಜಿತ್ ನಿರ್ದೇಶನದ ಗೌರಿ ಸಿನಿಮಾದ ಧೂಳ್ ಎಬ್ಬಿಸ್ತಾವ ಹಾಡು ಬಿಡುಗಡೆಯಾಗಿದೆ.
ಸಿನಿವಾರ್ತೆ
ಇಂದ್ರಜಿತ್ ಲಂಕೇಶ್ ನಿರ್ದೇಶನ, ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಅಯ್ಯರ್ ನಟಿಸಿರುವ ‘ಗೌರಿ’ ಚಿತ್ರದ ‘ಧೂಳ್ ಎಬ್ಬಿಸಾವ..’ ಹಾಡು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.
ಹುಬ್ಬಳ್ಳಿಯ ಜವಾರಿ ಭಾಷಾ ಶೈಲಿಯ ಹಾಡಿಗೆ ನಾಯಕ ಸಮರ್ಜಿತ್ ಲಂಕೇಶ್ ಹಾಗೂ ನಟಿ ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ. ಅನಿರುದ್ಧ್ ಶಾಸ್ತ್ರೀ, ಅನನ್ಯ ಭಟ್ ಈ ಹಾಡು ಹಾಡಿದ್ದಾರೆ. ‘ಗೌರಿ’ ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ, ವಸುಂಧರಾ ದಾಸ್, ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಮಾಲತಿ ಸುಧೀರ್, ಸಂಪತ್ ಮೈತ್ರೇಯ, ಚಂದು ಗೌಡ ನಟಿಸಿದ್ದಾರೆ.