ಮೆಟಾವರ್ಸ್‌ ಜಗತ್ತಿನ ಕಥೆ ಹೇಳುವ ಗ್ರೇ ಗೇಮ್ಸ್‌ ಸಿನಿಮಾ ಇವತ್ತು ತೆರೆ ಕಾಣುತ್ತಿದೆ.

ಯುವಜನರ ಮನಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತಿರುವ ಮೆಟಾವರ್ಸ್‌ ಗೇಮಿಂಗ್‌ ಕುರಿತ ‘ಗ್ರೇ ಗೇಮ್ಸ್‌’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ನಾಯಕ ವಿಜಯ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ವಿಜಯ ರಾಘವೇಂದ್ರ ಅಕ್ಕನ ಮಗ ಜೈ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಶ್ರುತಿ ಪ್ರಕಾಶ್‌ ನಾಯಕಿ. ಭಾವನಾ ರಾವ್‌ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿದ್ದಾರೆ. ಗಂಗಾಧರ ಸಾಲಿಮಠ ನಿರ್ದೇಶನದ ಚಿತ್ರಕ್ಕೆ ಆನಂದ್ ಎಸ್‌ ಮುಗದ್‌ ಬಂಡವಾಳ ಹೂಡಿದ್ದಾರೆ.