ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 1’ ಚಿತ್ರ ಮೂರನೇ ವಾರವೂ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದ್ದು, ವಿಶ್ವದಾದ್ಯಂತ ರೂ.818 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ 2025ರ ಅತ್ಯಧಿಕ ಗಳಿಕೆಯ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ

ಸಿನಿವಾರ್ತೆ

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 1’ ಚಿತ್ರ ಮೂರನೇ ವಾರವೂ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದ್ದು, ವಿಶ್ವದಾದ್ಯಂತ ರೂ.818 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ 2025ರ ಅತ್ಯಧಿಕ ಗಳಿಕೆಯ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲೇ ಮೂರನೇ ವಾರಕ್ಕೆ 200 ಕೋಟಿಗೂ ಹೆಚ್ಚು ಗಳಿಕೆಯ ಗಡಿ ದಾಟಿ ದಾಖಲೆ ಮಾಡಿದೆ.

ಅಲ್ಲು ಅರ್ಜುನ್‌ ಮೆಚ್ಚುಗೆ

ಅಲ್ಲು ಅರ್ಜುನ್‌ ‘ಕಾಂತಾರ 1’ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಕುರಿತು ಅವರು, ‘ವಾವ್ಹ್‌ ಎಂತಹ ಅದ್ಭುತ ಸಿನಿಮಾ. ನಾನು ಸಿನಿಮಾ ನೋಡುತ್ತಾ ಮೂಕವಿಸ್ಮಿತನಾಗಿದ್ದೆ. ರಿಷಬ್‌ ಶೆಟ್ಟಿ ಪ್ರತಿಯೊಂದು ಕಲೆಯಲ್ಲೂ ಶ್ರೇಷ್ಠರು. ರುಕ್ಮಿಣಿ ವಸಂತ್‌, ಜಯರಾಮ್‌, ಗುಲ್ಶನ್‌ ದೇವಯ್ಯ ಅಭಿನಯ ಸೂಪರ್‌. ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ, ಕಲಾ ನಿರ್ದೇಶನ ಹಾಗೂ ಸಾಹಸ ಎಲ್ಲವೂ ವರ್ಣಿಸಲು ಸಾಧ್ಯವಿಲ್ಲ.

ಹೊಂಬಾಳೆ ಫಿಲಮ್ಸ್‌ ತಂಡಕ್ಕೆ ಅಭಿನಂದನೆ

 ನಿರ್ಮಾಪಕ ವಿಜಯ್‌ ಕಿರಗಂದೂರು ಸೇರಿ ಇಡೀ ಹೊಂಬಾಳೆ ಫಿಲಮ್ಸ್‌ ತಂಡಕ್ಕೆ ಅಭಿನಂದನೆಗಳು. ಪ್ರಾಮಾಣಿಕವಾಗಿ ಹೇಳುವುದಾದರೆ ಈ ಸಿನಿಮಾ ನೀಡಿದ ಅನುಭವವನ್ನು ವಿವರಿಸಲು ಪದಗಳು ಸಾಲಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.