ಸಾರಾಂಶ
ಸಿನಿವಾರ್ತೆ : ಐಪಿಎಲ್, ಚುನಾವಣೆ ಇದ್ದರೂ ಯಾರಿಗೂ ಅಂಜುವುದಿಲ್ಲ ಎಂಬಂತೆ ಈ ವಾರ ಏಪ್ರಿಲ್ 5ರಂದು ಮೂರು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮೂರು ಸಿನಿಮಾಗಳು ಕೂಡ ಪ್ರಚಾರ ಆರಂಭಿಸಿದ್ದು, ನಿರೀಕ್ಷೆ ಹುಟ್ಟಿಸಿವೆ. ಆ ಮೂರು ಸಿನಿಮಾಗಳ ಮಾಹಿತಿ ಇಲ್ಲಿದೆ.
1. ಸತೀಶ್ ನೀನಾಸಂ ನಟನೆಯ ಮ್ಯಾಟ್ನಿ
ಸತೀಶ್ ನೀನಾಸಂ ನಟನೆಯ ಹಾರರ್ ಕಾಮಿಡಿ ‘ಮ್ಯಾಟ್ನಿ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಆಸಕ್ತಿ ಹುಟ್ಟಿಸುವಂತಿಕೆ. ಅದಿತಿ ಪ್ರಭುದೇವ, ರಚಿತಾರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ರಚಿತಾರಾಮ್ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿರುವಂತೆ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಮನೋಹರ ಕಾಂಪಲ್ಲಿ ನಿರ್ದೇಶನದ ಚಿತ್ರವನ್ನು ಪಾರ್ವತಿ ಗೌಡ ನಿರ್ಮಿಸಿದ್ದಾರೆ.
2. ದಿಗಂತ್ ನಾಯಕನಾಗಿರುವ ಮಾರಿಗೋಲ್ಡ್
ದಿಗಂತ್ ಮತ್ತು ಸಂಗೀತಾ ಶೃಂಗೇರಿ ಜೋಡಿಯಾಗಿ ನಟಿಸಿರುವ ಸಿನಿಮಾ ಇದು. ದಿಗಂತ್ ಮಾಸ್ ಹೀರೋ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾಘವೇಂದ್ರ ಎಂ ನಾಯ್ಕ್ ನಿರ್ದೇಶನದ ಈ ಚಿತ್ರವನ್ನು ರಘುನಂದನ್ ನಿರ್ಮಾಣ ಮಾಡಿದ್ದಾರೆ. ಚಿನ್ನದ ಬಿಸ್ಕಿಟ್ ಮಾರಲು ಹೊರಡುವ ನಾಲ್ವರು ತರುಣರ ಕತೆ ಹೊಂದಿರುವ ಸಿನಿಮಾ ಇದು.
3. ಶರಣ್ ಅಭಿನಯದ ಅವತಾರ ಪುರುಷ 2
ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಇದು. ಇದರ ಮೊದಲ ಭಾಗ ರಿಲೀಸ್ ಆಗಿ ಸುಮಾರು ಸಮಯ ಕಳೆದಿದೆ. ಬಹು ಸಮಯದ ನಂತರ ಈ ಸಿನಿಮಾ ತೆರೆ ಮೇಲೆ ಬರುತ್ತಿದೆ. ಶರಣ್ ವಾಮಾಚಾರ ವಸ್ತುವಿನ ಸಿನಿಮಾದಲ್ಲಿ ನಟಿಸಿದ್ದು, ಇದೇ ಮೊದಲು. ಹಾಗಾಗಿ ಎರಡನೇ ಭಾಗಕ್ಕೆ ಕುತೂಹಲ ಹೆಚ್ಚಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರ ಇದು.