ಸಾರಾಂಶ
ಜಗ್ಗೇಶ್ ಹಾಗೂ ಮಠ ಗುರುಪ್ರಸಾದ್ ಕಾಂಬಿನೇಶನ್‌ನ ರಂಗನಾಯಕ ಸಿನಿಮಾ 150ಕ್ಕೂ ಹೆಚ್ಚು ಥೇಟರ್‌ಗಳಲ್ಲಿ ಇಂದು ತೆರೆ ಕಾಣಲಿದೆ.
ಶಿವರಾತ್ರಿ ಹಬ್ಬವಾದ ಇಂದು ಜಗ್ಗೇಶ್ ಹಾಗೂ ಮಠ ಗುರುಪ್ರಸಾದ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ‘ರಂಗನಾಯಕ’ ತೆರೆ ಕಾಣುತ್ತಿದೆ. ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.‘ಮಠ’, ‘ಎದ್ದೇಳು ಮಂಜುನಾಥ’ದಂಥ ಯಶಸ್ವಿ ಸಿನಿಮಾಗಳ ಬಳಿಕ ಜಗ್ಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಶನ್‌ನಲ್ಲಿ ಹೊರಬರುತ್ತಿರುವ ಮೂರನೇ ಚಿತ್ರವಿದು. 15 ವರ್ಷಗಳ ಬಳಿಕ ಈ ಜೋಡಿ ಮತ್ತೊಂದು ಹಾಸ್ಯ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ರಚಿತಾ ಮಹಾಲಕ್ಷ್ಮೀ, ಗುರುಪ್ರಸಾದ್, ಚೈತ್ರಾ ಕೊಟ್ಟೂರು, ಎಂ.ಕೆ.ಮಠ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಇದೆ. ನಿರ್ಮಾಪಕ ಎ.ಆರ್. ವಿಖ್ಯಾತ್ ಈ ಸಿನಿಮಾ ನಿರ್ಮಿಸಿದ್ದಾರೆ. ಸಾಮ್ರಾಟ್ ಅಶೋಕ್ ಗೌತಮ್ ಛಾಯಾಗ್ರಹಣ, ಉಮೇಶ್ ಬಿ.ಆರ್. ಸಂಕಲನ, ಕುಲಕರ್ಣಿ ಕಲಾ ನಿರ್ದೇಶನ ಮಾಡಿದ್ದಾರೆ.